ಬೆಂಗಳೂರು: ಇನ್ನಾದರೂ ಲೂಟಿ ಮಾಡುವುದನ್ನು ನಿಲ್ಲಿಸಿ, ಎಚ್ ಎಂಟಿ ಕಂಪನಿ ಪುನಶ್ಚೇತನಕ್ಕೆ ಸಹಕಾರ ನೀಡಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪುಟ್ಟೇನಹಳ್ಳಿ ಕೆರೆ ಮುಚ್ಚಿ ಹಾಕಿ ಡಾಲರ್ಸ್ ಕಾಲೋನಿ ಮಾಡಿದರು. ಯಾರ ಕಾಲದಲ್ಲಿ ನಾನು ಅಲ್ಲಿ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ಕೈಗೊಂಡು ಮಾಡಿ ತೋರಿಸಿದೆ. ಲಾಟರಿ ಸಿಸ್ಟಮ್ನಲ್ಲೇ ಪ್ರತಿ ಬಾರಿಯೂ ನನಗೆ ಅಧಿಕಾರ ಸಿಕ್ಕಿದೆ. ಆ ಲಾಟರಿ ಅಧಿಕಾರದಲ್ಲೇ ಜನರಿಗೆ ಆದಷ್ಟು ಒಳ್ಳೇ ಕೆಲಸ ಮಾಡಿದ್ದೇನೆ. ಆದರೆ ನಿವೇನು ಮಾಡಿದ್ದೀರಿ ಎಂದು ಡಿ.ಕೆ.ಶಿವಕುಮಾರ್ ವಿರುದ್ದ ಗುಡುಗಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಸಂಡೂರಿನಲ್ಲಿ ದೇವದಾರದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಪರಿಸರ ರಕ್ಷಣೆಗೆ 192 ಕೋಟಿ ವರ್ಗಾವಣೆ ಮಾಡಿದ್ದಾರೆ. ಕೆಲವೊಂದು ತಾಂತ್ರಿಕ ತಪ್ಪುಗಳು ಆಗಿವೆ. ಅದನ್ನು ಸರಿಪಡಿಸಿಕೊಳ್ಳಲು ಸಂಸ್ಥೆ ರೆಡಿ ಇದೆ. ಅರಣ್ಯ ಸಚಿವರು ತಡೆಯಾಜ್ಞೆ ತರಲು ಟಿಪ್ಪಣಿ ಬಿಡುಗಡೆ ಮಾಡಿದ್ದಾರೆ. ವರ್ಷಕ್ಕೆ 120 ಕೋಟಿ ನಷ್ಟ ಆಗುತ್ತದೆ. ಅಲ್ಲಿನ ಕುಟುಂಬಗಳು ಬೀದಿಗೆ ಬರಲಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೆಚ್ ಎಂಟಿಯಲ್ಲಿ 1970 ರಲ್ಲಿ 270 ಕೋಟಿ ವಾರ್ಷಿಕ ಆದಾಯ ಇತ್ತು. ಬಂದ ಲಾಭ ದಿಂದ ದೇಶದ ಹಲವು ಕಡೆ ಕಂಪನಿ ಸ್ಥಾಪನೆ ಮಾಡಲಾಯಿತು. ಹೈದರಾಬಾದ್, ಜಾರ್ಖಾಂಡ್ ಕಾರ್ಖಾನೆಗಳು ನಡೆಯುತ್ತಿದ್ದವು. ಕುಮಾರಸ್ವಾಮಿ ಹೆಚ್‌ಎಂಟಿ ಕಾರ್ಖಾನೆಗೆ ಭೇಟಿ ಕೊಟ್ಟ ಕಾರಣಕ್ಕೆ ಅಡ್ಡಗಾಲು ಹಾಕಲಾಗುತ್ತಿದೆ. ವಿಶ್ವೇಶ್ವರಯ್ಯ ಕನಸಿನ ಕಾರ್ಖಾನೆ ಉಳಿಸಬೇಕೆಂದು ನಾನು ಶ್ರಮ ಹಾಕುತ್ತಿದ್ದೇನೆ. ಹೆಚ್‌ಎಂಟಿಗೆ 599 ಎಕರೆ ಜಮೀನನ್ನು ಸರ್ಕಾರ ಪುಕ್ಕಟೆ ಕೊಟ್ಟಿಲ್ಲ. ನಾನು ಕರೆ ಮಾಡಿದ ಅಧಿಕಾರಿಗಳು ಎಲ್ಲಾ ದಾಖಲೆಗಳನ್ನ ತೆಗೆದಿಟ್ಟಿದ್ದಾರೆ. 1963 ಡಿಸೆಂಬರ್ 4 ರಂದು 4.40 ಲಕ್ಷ ಹಣ ಕಟ್ಟಲಾಗಿದೆ. ಮಂಜೂರಾದ ಜಮೀನಿಗೆ ದುಡ್ಡು ಕಟ್ಟಿದ್ದಾರೆ, ಪುಕ್ಕಟೆ ತೆಗೆದುಕೊಂಡಿಲ್ಲ. ನಾನು ಜಸ್ಟ್ ಎಂಟ್ರಿಯಾಗಿದ್ದಕ್ಕೆ 45 ರೂ ಇದ್ದ ಶೇರ್ ವ್ಯಾಲ್ಯೂ 92ಕ್ಕೆ ಏರಿದೆ. ಇದಕ್ಕೆ ಅಡ್ಡಗಾಲು ಹಾಕಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.