ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಮಧ್ಯೆ ನಡೆಯುತ್ತಿರುವ ಟೆಸ್ಟ್ ಟೂರ್ನಿಯಲ್ಲಿ ಇಂಗ್ಲೆಂಡ್ ಆಟಗಾರ ಜೋ ರೂಟ್ ಭರ್ಜರಿ ದಾಖಲ ಬರೆದಿದ್ದಾರೆ.
ಟೆಸ್ಟ್ ನ ಮೂರನೇ ದಿನದದಾಟದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ರೂಟ್ 167 ಎಸೆತಗಳಲ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನದ 45ನೇ ಟೆಸ್ಟ್ ಶತಕ ಸಿಡಿಸುವುದರ ಮೂಲಕ ದಾಖಲೆ ಬರೆದಿದ್ದಾರೆ. ಈ ಶತಕದ ಮೂಲಕ ಜೋ ರೂಟ್ ವೆಸ್ಟ್ ಇಂಡೀಸ್ನ ದಿಗ್ಗಜ ಬ್ರಿಯಾನ್ ಲಾರಾ ಸೇರಿದಂತೆ ನಾಲ್ವರು ಕ್ರಿಕೆಟ್ ದಿಗ್ಗಜರ ದಾಖಲೆ ಮುರಿದಿದ್ದಾರೆ.
ರೂಟ್ ಅವರು ಲಾರಾ ಹೊರತುಪಡಿಸಿ ಸುನಿಲ್ ಗವಾಸ್ಕರ್, ಯೂನಿಸ್ ಖಾನ್ ಹಾಗೂ ಶ್ರೀಲಂಕಾದ ಮಾಹೇಲಾ ಜಯವರ್ಧನೆ ಅವರ ದಾಖಲೆಯನ್ನೂ ಮುರಿದಿದ್ದಾರೆ. ಈ ನಾಲ್ವರು ಮಾಜಿ ಕ್ರಿಕೆಟಿಗರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ ತಲಾ 34 ಶತಕ ಸಿಡಿಸಿದ ಸಾಧನೆ ಮಡಿದದ್ರು.
ಅಲ್ಲದೇ, ಈ ದಾಖಲೆಯೊಂದಿಗೆ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ರಾಹುಲ್ ದ್ರಾವಿಡ್ ಅವರನ್ನು ಸರಿಗಟ್ಟಲು ಕೇವಲ ಒಂದು ಶತಕದ ಹಿಂದೆ ಉಳಿದಿದ್ದಾರೆ. 2024 ರಲ್ಲಿ ಜೋ ರೂಟ್ ಸಿಡಿಸಿದ 5 ನೇ ಶತಕ ಇದಾಗಿದ್ದು, ಈ ಮೂಲಕ ಅವರು ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ 1 ಸಾವಿರಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ಸಾಧನೆ ಮಾಡಿದ್ದಾರೆ.
73 ರನ್ ಗಳಿಸಿದ ಕೂಡಲೇ ರೂಟ್, ಇಂಗ್ಲೆಂಡ್ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನೂ ಬರೆದುಕೊಂಡರು. ಇಂಗ್ಲೆಂಡ್ ನ ಕುಕ್ ತಮ್ಮ ವೃತ್ತಿ ಜೀವನದ 161 ಪಂದ್ಯಗಳಲ್ಲಿ 45ರ ಸರಾಸರಿಯಲ್ಲಿ 12,472 ರನ್ ಗಳಿಸಿದ್ದರು. ಈ ದಾಖಲೆಯನ್ನು ಕೂಡ ರೂಟ್ ಮುರಿದಿದ್ದಾರೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಇತಿಹಾಸದಲ್ಲಿ 5000 ರನ್ ಪೂರೈಸಿದ ವಿಶ್ವದ ಮೊದಲ ಮತ್ತು ಏಕೈಕ ಬ್ಯಾಟ್ಸ್‌ಮನ್ ರೂಟ್ ಆಗಿದ್ದಾರೆ.