ನವದೆಹಲಿ : ಅತ್ತ ಗಂಗೆಯಲ್ಲಿ ಹೈಡ್ರೋಜನ್ ಬೋಟ್ ಆದ್ರೆ ಇತ್ತ ಟಾಯೋಟಾ ಹೈಡ್ರೋಜನ್ ಕಾರಿನಲ್ಲಿ ಸಂಸತ್‌ಗೆ ಬಂದಿದ್ದಾರೆ ಇಂಧನ ಸಚಿವ ಪ್ರಹ್ಲಾದ್ ಜೋಶಿ ದೆಹಲಿಯಲ್ಲಿ ಹೈಡ್ರೋಜನ್ ಕಾರನ್ನೇ ಚಲಾಯಿಸಿಕೊಂಡು ಅಧಿವೇಶನಕ್ಕೆ ಬಂದಿರುವುದು ದೇಶದ ಜನರ ಹುಬ್ಬೇರಿಸುವಂತೆ ಮಾಡಿದ್ದಾರೆ. ಅಲ್ಲದೇ ಸ್ವತಃ ತಾವೇ ವಿನೂತನ ತಂತ್ರಜ್ಞಾನದ ಹೈಡ್ರೋಜನ್ ಕಾರು ಚಾಲಾಯಿಸಿಕೊಂಡು ಬಂದು. ಭಾರತದ ಹೈಡ್ರೋಜನ್ ವಾಹನಗಳ ಯುಗಾರಂಭಕ್ಕೆ ನಾಂದಿ ಹಾಡಿದರು.
ದೆಹಲಿಯ ಅಟಲ್ ಅಕ್ಷಯ ಉರ್ಜ ಭವನದಿಂದ ಸಂಸತ್ ಭವನಕ್ಕೆ ಹಸಿರು ಬಣ್ಣದ ಹೈಡ್ರೋಜನ್ ಕಾರಿನಲ್ಲೇ ಬಂದಿದ್ದ ಜೋಶಿ, ದೇಶದಲ್ಲಿ ಹಸಿರು ಶಕ್ತಿಗೆ ಉತ್ತೇಜನ ನೀಡಿದಂತಾಯ್ತು..ಈ ಕಾರು ಕಿರ್ಲೋಸ್ಕರ್ ಕಂಪನಿ ಮತ್ತು NISE ಅಡಿಯಲ್ಲಿ ತಯಾರಿಸಿದೆ. ಈ ಕಾರಿನ ಸಂಚಾರಕ್ಕೆ ಪೆಟ್ರೋಲ್, ಡಿಸೇಲ್ ಅಲ್ಲ, ಕೇವಲ ಹೈಡ್ರೋಜನ್ನೇ ಸಾಕು. ಅಲ್ಲದೇ ಇದು ವಾಯುಮಾಲಿನ್ಯ ಅಷ್ಟೇ ಅಲ್ಲ ಶಬ್ದ ಮಾಲಿನ್ಯವನ್ನೂ ತಡೆಗಟ್ಟುತ್ತೇ.
ಭಾರತ ಈಗ ಹೈಡ್ರೋಜನ್ ಚಾಲಿತ ರಾಷ್ಟ್ರವಾಗುವ ದಾರಿಯಲ್ಲಿ ಭಾರಿ ವೇಗದಿಂದ ಸಾಗುತ್ತಿದೆ. ಪರಿಸರ ಸ್ನೇಹಿ, ಶೂನ್ಯ ಮಾಲಿನ್ಯ ಮತ್ತು ಭವಿಷ್ಯದ ಇಂಧನ ಎಂದು ಕರೆಯಲಾಗುವ ಹಸಿರು ಹೈಡ್ರೋಜನ್ ಬಳಕೆ ಇನ್ನು ಕೇವಲ ಪುಸ್ತಕದಲ್ಲಲ್ಲ. ನೆಲದಲ್ಲಿ ಜಾರಿಗೆ ಬರುತ್ತಿದೆ. ಇದಕ್ಕೆ ನಿದರ್ಶನವಾಗಿ ವಾರಣಾಸಿಯ ವಾಟರ್ ಟ್ಯಾಕ್ಸಿ ಮತ್ತು ಪ್ರಹ್ಲಾದ್ ಜೋಷಿ ಚಲಾಯಿಸಿದ ಹೈಡ್ರೋಜನ್ ಕಾರೇ ಸಾಕ್ಷಿ.. ಖನಿಜ ಇಂಧನಕ್ಕೆ ಪರ್ಯಾಯ ಹುಡುಕುತ್ತಿರುವಾಗ… ಭಾರತ ಹೈಡ್ರೋಜನ್ ತಂತ್ರಜ್ಞಾನವನ್ನು ಅತ್ಯಂತ ವೇಗದಲ್ಲಿ ಅಳವಡಿಸಿಕೊಳ್ಳುತ್ತಿದೆ..
ವಾಟರ್ ಟ್ಯಾಕ್ಸಿಯಿಂದ ಹಿಡಿದು ಹೈಡ್ರೋಜನ್ ಕಾರಿನವರೆಗೆ .. ಭಾರತ ಗ್ರೀನ್ ಎನರ್ಜಿ ಕ್ರಾಂತಿಯಲ್ಲಿ ವಿಶ್ವಕ್ಕೆ ಮಾದರಿಯಾಗುತ್ತಿದೆ.ಇದು ಕೇವಲ ತಂತ್ರಜ್ಞಾನ ಅಭಿವೃದ್ಧಿ ಅಲ್ಲ,ಪರಿಸರ ಸಂರಕ್ಷಣೆಯತ್ತ, ಶೂನ್ಯ ಮಾಲಿನ್ಯದತ್ತ, ಹೊಸ ಯುಗದತ್ತ – ಭಾರತ ಹಾಕಿರುವ ಭರವಸೆಯ ಹೆಜ್ಜೆ.
ಇದನ್ನೂ ಓದಿ : ತುಮಕೂರು | ಸಹಾಯ ಧನ ಮಂಜೂರು ಮಾಡಲು 1.25 ಲಕ್ಷ ಲಂಚಕ್ಕೆ ಬೇಡಿಕೆ.. ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!



















