ಬೆಂಗಳೂರು : ಬಿಬಿಎಂಪಿ ತಡವಾಗಿಯಾದರೂ ಬೆಂಗಳೂರು ದಕ್ಷಿಣ ವಲಯದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಚರಣೆಯನ್ನು ಆರಂಭಿಸಿದೆ.
ದಕ್ಷಿಣ ವಲಯದ 6 ಕಡೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಚರಣೆಯನ್ನು ಬಿಬಿಎಂಪಿ ಆರಂಭಿಸಿದೆ. ದಕ್ಷಿಣ ವಲಯ ಆಯುಕ್ತ ದಿಗ್ವಿಜಯ್ ಬೋಡ್ಕೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಪಾದಾಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಅಂಗಡಿ ಮುಂಗಟ್ಟುಗಳ ನಿರ್ಮಾಣ ಮಾಡಿಕೊಳ್ಳಲಾಗಿತ್ತು. ಈ ಹಿನ್ನೆಲೆ ಇಂದು ಒತ್ತುವರಿ ತೆರವು ಮಾಡಿದೆ. ಕೆ.ಆರ್. ರಸ್ತೆಯಿಂದ ಈಸ್ಟ್ ಆಂಜನೇಯ ರಸ್ತೆಯವರೆಗೆ ಮತ್ತು ಲಸ್ಕರ್ ಹೊಸೂರು ರಸ್ತೆ 20ನೇ ಮುಖ್ಯರಸ್ತೆ ಸೇರಿದಂತೆ ಕೆಲವು ಕಡೆ ಇಂದು ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ ಎಂದು ಬಿಬಿಎಂಪಿ ಮೂಲಗಳು ಹೇಳಿವೆ.