ಮುಂಬಯಿ: ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಅಭಿನಯದ ‘ಎಮರ್ಜೆನ್ಸಿ’ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸ್ಥಿತಿಯಲ್ಲಿದೆ.
ಜ. 17ರಂದು ಬಿಡುಗಡೆಯಾಗಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ಹಲವರು ಚಿತ್ರ ಮೆಚ್ಚಿಕೊಂಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಂಗನಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ, ಸಿನಿಮಾ ಗಳಿಕೆಯಲ್ಲಿ ಮಾತ್ರ ಹಿನ್ನಡೆ ಸಾಧಿಸಿದೆ. ಹೀಗಾಗಿ ಕಂಗನಾ ಶಾಕ್ ಆಗಿದ್ದಾರೆ.
ಈ ಚಿತ್ರವನ್ನು ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. 25 ಕೋಟಿ ರೂ. ಬಜೆಟ್ ನಲ್ಲಿ ಈ ಚಿತ್ರ ನಿರ್ಮಾಣ ಮಾಡಿದೆ. ‘ಎಮರ್ಜೆನ್ಸಿ’ ಸಿನಿಮಾ ಮೊದಲ ದಿನ 2.5 ಕೋಟಿ ರೂ. ಗಳಿಕೆ ಮಾಡಿದೆ. ಶನಿವಾರ (ಜನವರಿ 18) ಚಿತ್ರ ಉತ್ತಮ ಗಳಿಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವತ್ತು ಸರಿಯಾದ ರೆಸ್ಪಾನ್ಸ್ ಸಿಕ್ಕಿಲ್ಲ. ಎರಡನೇ ಸಿನಿಮಾ ಕೇವಲ 2.74 ಕೋಟಿ ರೂ. ಗಳಿಕೆ ಮಾಡಿದೆ. ಮೂರನೇ ದಿನ ಭಾನುವಾರ (ಜನವರಿ 19) ಎಷ್ಟು ಕೋಟಿ ರೂ. ಗಳಿಕೆ ಮಾಡುತ್ತದೆ ಎಂಬುವುದರ ಆಧಾರದ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ.
‘ಎಮರ್ಜೆನ್ಸಿ’ ಚಿತ್ರದ ಬಜೆಟ್ 25 ಕೋಟಿ ರೂ. ಗೂ ಅಧಿಕವಾಗಿದೆ. ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದರೆ ಮಾತ್ರ ನಿರ್ಮಾಪಕಿ ಆಗಿ ಕಂಗನಾಗೆ ಲಾಭ ಆಗಲಿದೆ. ಇಲ್ಲವಾದರೆ, ಎಮರ್ಜೆನ್ಸಿ ಪ್ಲಾಫ್ ಆಗಲಿದೆ.