ರಾಮನಗರ : ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಭ್ರೂಣಲಿಂಗ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಇಂದು(ಬುಧವಾರ) ಕೋರ್ಟ್ ಗೆ ಪಿಸಿಆರ್ ಸಲ್ಲಿಕೆ ಮಾಡಲು ಮುಂದಾಗಿದೆ.
26 ವರ್ಷದ ಗರ್ಭಿಣಿ ಮಹಿಳೆಯನ್ನು ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಮಧ್ಯಮರ್ತಿಗಳಾದ ಶಾರದ ಹಾಗೂ ಭಾಗ್ಯ ಅವರು ವೈದ್ಯರಿಗೆ 19 ಸಾವಿರ ರೂ. ನೀಡುವುದಾಗಿ ಸ್ಕ್ಯಾನಿಂಗ್ ಮಾಡಿಸಲಾಗಿತ್ತು, ಈ ವೇಳೆ ವೈದ್ಯ ಡಾ.ಶಶಿ ಎಸ್.ಎಲ್ ಸ್ಕ್ಯಾನಿಂಗ್ ಮಾಡಿ ನಂತರ ಹೆಣ್ಣು ಭ್ರೂಣ ಎಂದು ತಿಳಿಸಿದ್ದಾರೆ.
ನಂತರ ಬೆಂಗಳೂರಿನ ಡ್ಯಾನಿಷ್ ಪಾಲಿಕ್ಲಿನಿಕ್ ನಲ್ಲಿ ಕರುಳ ಬಳ್ಳಿ ಕೊಲ್ಲಲು ಮಾತ್ರೆ ನೀಡಲಾಗಿತ್ತು, ಆದರೆ ತೀವ್ರ ರಕ್ತಸ್ರಾವವಾದ ಹಿನ್ನೆಲೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಎಂದು ತಿಳಿದು ಬಂದಿದೆ.
ಆ.23 ರಂದು ಈ ಪ್ರಕರಣ ಬೆಳಕಿಗೆ ಬಂದಿದ್ದು, ಘಟನೆ ನಂತರ ರಾಮನಗರ ಜಿಲ್ಲಾಸ್ಪತ್ರೆಯ ರೇಡಿಯಾಲಾಜಿಸ್ಟ್ ಡಾ.ಶಶಿ ಎಸ್.ಎಲ್ ರನ್ನು ಅಮಾನತು ಮಾಡಲಾಗಿದೆ.
ಈ ಘಟನೆ ಬಗ್ಗೆ ಡಿಹೆಚ್ಒ ಡಾ.ನಿರಂಜನ್ ಅವರು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.



















