ಹುಬ್ಬಳ್ಳಿ : ಕನ್ನಡ ಚಿತ್ರರಂಗದಲ್ಲಿ ಕಾಂತಾರ ಸಿನೆಮಾದ ಬಳಿಕ ನಮ್ಮ ನೆಲದ ಸೊಗಡಿನ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈಗ ಈ ಸಾಲಿಗೆ ಮಡಿಕೇರಿಯ ಜನರ ಕಥೆ ಹೇಳಲು ಸಜ್ಜಾಗಿರುವ ʼಎಲ್ಟು ಮುತ್ತಾʼ ಸೇರಿದೆ. ಈಗಾಗಲೇ ಟೀಸರ್ ಮೂಲಕ ಗಮನ ಸೆಳೆದಿರುವ ಹೊಸಬರ ʼಎಲ್ಟು ಮುತ್ತಾʼ ಈಗ ಕೊಡವರ ಪದಗಳ ಹಾಡೊಂದನ್ನು ರಿಲೀಸ್ ಮಾಡಿ ಸಿನೆಮಾ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಸದ್ಯ, ಸಿನಿಮಾದ ಮೇಲಿನ ಕುತೂಹಲ ಹೆಚ್ಚಿಸಿದೆ. ಎಲ್ಟು ಮುತ್ತಾ ಇದೇ ತಿಂಗಳ ಕೊನೆ ವಾರದಲ್ಲಿ ರಿಲೀಸ್ ಆಗುತ್ತಿದ್ದು, ಚಿತ್ರತಂಡ ಗ್ರಾಮೀಣ ಭಾಗದ ಪ್ರೇಕ್ಷಕರನ್ನು ಸೆಳೆಯುವ ಸಲುವಾಗಿ ಹುಬ್ಬಳ್ಳಿಯಲ್ಲಿ ಆದ್ದೂರಿಯಾಗಿ ಆಡಿಯೋ ಲಾಂಚ್ ಮಾಡಿದೆ.
ಆಡಿಯೋ ಲಾಂಚ್ ಮಾಡುವ ಮೂಲಕ ಸಿನೆಮಾದ ಹಾಡೊಂದನ್ನು ಈಗ ರಿಲೀಸ್ ಮಾಡಿದೆ. ಇದೇ ಸಂದರ್ಭದಲ್ಲಿ ಗಾಯಕಿ ಸಂಗೀತಾ ಕಟ್ಟಿಗೆ ಸನ್ಮಾನ ಮಾಡುವ ಮೂಲಕ ಗೌರವಿಸಿದ್ದಾರೆ.


















