ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ, ಟೆಸ್ಲಾ ಸ್ಥಾಪಕ, ಉದ್ಯಮಿ ಎಲಾನ್ ಮಸ್ಕ್- ಶಿವೋನ್ ಝಿಲಿಸ್ ದಂಪತಿಗೆ 4ನೇ ಮಗು ಜನಿಸಿದ್ದು, ಶನಿವಾರ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಮೂಲಕ ಎಲಾನ್ ಮಸ್ಕ್ ಅವರ ಒಟ್ಟು ಮಕ್ಕಳ ಸಂಖ್ಯೆ 14ಕ್ಕೇರಿದಂತಾಗಿದೆ.
ವಿಶೇಷವೆಂದರೆ, ಝಿಲಿಸ್ ಮತ್ತು ಮಸ್ಕ್ ಇಲ್ಲಿಯವರೆಗೆ ತಮ್ಮ ಮೂರನೇ ಮತ್ತು ನಾಲ್ಕನೇ ಮಗುವಿನ ಗುರುತನ್ನು ಖಾಸಗಿಯಾಗಿಟ್ಟಿದ್ದರು. 2024ರ ಆರಂಭದಲ್ಲಿ ದಂಪತಿಗೆ 3ನೇ ಮಗು(ಅರ್ಕಾಡಿಯಾ) ಹುಟ್ಟಿತ್ತು. ಅರ್ಕಾಡಿಯಾ ಜನ್ಮದಿನದಂದೇ 4ನೇ ಮಗುವಿನ ಆಗಮನವನ್ನು ದಂಪತಿ ಬಹಿರಂಗಪಡಿಸಿದ್ದಾರೆ. 4ನೇ ಮಗುವಿಗೆ ಸೆಲ್ಡನ್ ಎಂದು ನಾಮಕರಣ ಮಾಡಲಾಗಿದೆ.
ಇನ್ ಫ್ಲೂಯೆನ್ಸ್ ಆಶ್ಲೆ ಸೇಂಟ್ ಕ್ಲೇರ್ ಅವರು, ತಾವು 5 ತಿಂಗಳ ಹಿಂದೆ ಎಲಾನ್ ಮಸ್ಕ್ ಅವರ ಮಗುವಿಗೆ ಜನ್ಮ ನೀಡಿದ್ದಾಗಿ ಇತ್ತೀಚೆಗೆ ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದವು ಮಗುವಿನ ಡಿಎನ್ಎ ಪರೀಕ್ಷೆಯವರೆಗೂ ಹೋಗಿದ್ದು, ಅದರ ಬೆನ್ನಲ್ಲೇ ಟ್ರಂಪ್-ಝಿಲಿಸ್ ದಂಪತಿ 4ನೇ ಮಗುವಿಗೆ ಜನ್ಮ ನೀಡಿರುವ ಸುದ್ದಿ ಹೊರಬಿದ್ದಿದೆ.
ಟ್ವೀಟರ್ ನಲ್ಲಿ ತಮ್ಮ ಹೊಸ ಮಗುವಿನ ಆಗಮನದ ಕುರಿತು ಬರೆದುಕೊಂಡಿರುವ ಝಿಲಿಸ್, “ನಾನು ಮತ್ತು ಮಸ್ಕ್ ನಮ್ಮ ಮಗನ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡಲು ನಿರ್ಧರಿಸಿದ್ದೇವೆ. ಮಸ್ಕ್ ಜೊತೆ ಈ ವಿಚಾರವಾಗಿ ಚರ್ಚಿಸಿ, ನಮ್ಮ 3ನೇ ಮಗು ಅರ್ಕಾಡಿಯಾ ಜನ್ಮದಿನದಂದೇ, ನಮ್ಮ 4ನೇ ಪುತ್ರ ಸೆಲ್ಡನ್ ಲೈಕರ್ಗಸ್ ಜನನ ಕುರಿತು ನೇರವಾಗಿ ಹಂಚಿಕೊಳ್ಳುವುದು ಉತ್ತಮ ಎಂದು ನಾವು ಭಾವಿಸಿದೆವು. ಐ ಲವ್ ಹಿಮ್ ಸೋ ಮಚ್” ಎಂದು ಬರೆದುಕೊಂಡಿದ್ದಾರೆ.

ಟೆಸ್ಲಾ ಸಿಇಒ ಕನಿಷ್ಠ 14 ಮಕ್ಕಳ ತಂದೆ. ಈ ಪೈಕಿ ನಾಲ್ಕು ಮಕ್ಕಳು ಝಿಲಿಸ್ ಅವರಿಗೆ ಹುಟ್ಟಿರುವುದು (ಅವಳಿ ಮಕ್ಕಳಾದ ಸ್ಟ್ರೈಡರ್ ಮತ್ತು ಅಜುರೆ, ಅರ್ಕಾಡಿಯಾ ಮತ್ತು ಈಗ ಸೆಲ್ಡನ್). ಇಲ್ಲಿಯವರೆಗೆ, ದಂಪತಿ ತಮ್ಮ ಮೂರನೇ ಮಗುವಿನ ಹೆಸರು ಮತ್ತು ಲಿಂಗವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿರಲಿಲ್ಲ
ಒಟ್ಟು 14 ಮಕ್ಕಳು!
ಈಗಿನ ಪತ್ನಿ ಝಿಲಿಸ್ ಅವರೊಂದಿಗೆ 4 ಮಕ್ಕಳನ್ನು ಹೊಂದಿರುವ ಮಸ್ಕ್, ಒಟ್ಟಾರೆಯಾಗಿ 14 ಮಕ್ಕಳ ತಂದೆಯಾಗಿದ್ದಾರೆ. ಮಸ್ಕ್ ಮೊದಲ ಪತ್ನಿ ಜಸ್ಟಿನ್ ವಿಲ್ಸನ್ ಅವರಿಗೆ 5 ಮಕ್ಕಳು (ಅವಳಿಗಳಾದ ವಿವಿಯನ್ ಮತ್ತು ಗ್ರಿಫ್ಫಿನ್, ತ್ರಿವಳಿಗಳಾದ ಕಾಯ್, ಸ್ಯಾಕ್ಸನ್ ಮತ್ತು ಡ್ಯಾಮಿಯನ್). ಅವರ ಮೊದಲ ಮಗು ನೇವಡಾ ಅಲೆಕ್ಸಾಂಡರ್ ಮಸ್ಕ್ 10 ವಾರಗಳಲ್ಲೇ ಮೃತಪಟ್ಟಿತ್ತು. ಇನ್ನು, ಸಂಗೀತಗಾರ್ತಿ ಗ್ರಿಮ್ಸ್ ಅವರಿಂದ ಮಸ್ಕ್ 3 ಮಕ್ಕಳನ್ನು ಹೊಂದಿದ್ದಾರೆ. ಇದಲ್ಲದೇ ಇತ್ತೀಚೆಗೆ ಆಶ್ಲೆ ಸೇಂಟ್ ಕ್ಲೇರ್ ಐದು ತಿಂಗಳ ಹಿಂದೆ ಮಸ್ಕ್ ಅವರ ಗಂಡು ಮಗುವಿಗೆ ಜನ್ಮ ನೀಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ಹೇಳಿಕೆಯನ್ನು ಮಸ್ಕ್ ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ. ಇದಿಷ್ಟೇ ಅಲ್ಲದೆ, ಹಲವು ಗೆಳೆಯರು ಹಾಗೂ ಆತ್ಮೀಯರಿಗೆ ಮಸ್ಕ್ ತಮ್ಮ ವೀರ್ಯದಾನ ಮಾಡಿದ್ದಾರೆ. ಸುಸ್ಥಿರ ಭವಿಷ್ಯಕ್ಕೆ ದೊಡ್ಡ ಕುಟುಂಬದ ಅಗತ್ಯವಿದೆ ಎನ್ನುವುದು ಮಸ್ಕ್ ಅವರ ವಾದವಾಗಿದೆ.