ಚಿಕ್ಕಮಗಳೂರು: ಕೃಷಿ ಹೊಂಡದಲ್ಲಿ ಈಜಾಡಿ ಕಾಡಾನೆ ತುಂಟಾಟ ಮಾಡಿರುವ ಘಟನೆಯೊಂದು ನಡೆದಿದೆ.
ಮೂಡಿಗೆರೆ ತಾಲೂಕಿನ ಕಮ್ಮರಗೋಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಒಂದು ಗಂಟೆಗಳ ಕಾಲ ಕೃಷಿ ಹೊಂಡದಲ್ಲಿ ಕಾಡಾನೆ ಎಂಜಾಯ್ ಮಾಡಿದೆ. ಸ್ಥಳೀಯರ ಮೊಬೈಲ್ನಲ್ಲಿ ಈ ವೀಡಿಯೋ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೂಡಿಗೆರೆ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.