ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ದೊಡ್ಡ ಪೈಪೋಟಿಗಳು ನಡೆಯುತ್ತಿವೆ. ಅಲ್ಲದೇ, ಬಣ ಸಂಘರ್ಷ ಕೂಡ ಜೋರಾಗಿವೆ. ಈ ಮಧ್ಯೆ ನೂತನ ಬಿಜೆಪಿ ಅಧ್ಯಕ್ಷರ ಆಯ್ಕೆಗಾಗಿ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಿ ಬಿಜೆಪಿ ಆದೇಶ ಹೊರಡಿಸಿದೆ.
ಕರ್ನಾಟಕಕ್ಕೆ ಚುನಾವಣಾಧಿಕಾರಿಯಾಗಿ ಶಿವರಾಜ್‌ಸಿಂಗ್ ಚವ್ಹಾಣ್ ನೇಮಕವಾಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಪಕ್ಕಾ ಎನ್ನಲಾಗುತ್ತಿದೆ. ರಾಜ್ಯ ಅಷ್ಟೇ ಅಲ್ಲದೇ, ಆಂಧ್ರ ಪ್ರದೇಶಕ್ಕೆ ಚುನಾವಣಾ ಅಧಿಕಾರಿಯಾಗಿ ಪಿ.ಸಿ. ಮೋಹನ್, ತೆಲಂಗಾಣ ಚುನಾವಣಾ ಅಧಿಕಾರಿಯಾಗಿ ಶೋಭಾ ಕರಂದ್ಲಾಜೆ ನೇಮಕವಾಗಿದ್ದಾರೆ.
ಈ ಮಧ್ಯೆ ರಾಜ್ಯಾಧ್ಯಕ್ಷರಾಗಿ ಉಳಿಯುವುದಕ್ಕಾಗಿ ಬಿ.ವೈ. ವಿಜಯೇಂದ್ರ ಪ್ರಯತ್ನಿಸುತ್ತಿದ್ದಾರೆ. ಈಗ ಈ ರೇಸ್ ನಲ್ಲಿ ಶೋಭಾ ಕರಂದ್ಲಾಜೆ, ಬಸವರಾಜ ಬೊಮ್ಮಾಯಿ ಹೆಸರು ಕೂಡ ಇವೆ.
ಇತ್ತೀಚೆಗಷ್ಟೇ ಗೃಹ ಸಚಿವರನ್ನು ಭೇಟಿ ಮಾಡಿದ್ದ ಬಿ.ವೈ. ವಿಜಯೇಂದ್ರ, ಪಕ್ಷದಲ್ಲಿನ ಭಿನ್ನಮತಕ್ಕೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದರು.