ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ ಇಂದು ಚುನಾವಣೆ ನಡೆಯುತ್ತಿದೆ. ಬಿಜೆಪಿ, ಆಪ್ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇದ್ದರೂ ಮತದಾರ ಇಂದು ಯಾರ ಪರ ಭವಿಷ್ಯ ಬರೆಯುತ್ತಾನೆ ಎಂಬುವುದನ್ನು ನೋಡಬೇಕಿದೆ. 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಆರಂಭಗೊಂಡಿದೆ.
ದೆಹಲಿ ರಾಜಕೀಯ (Delhi Election) ಬಿಸಿಯೇರಿದ್ದು ಬೆಳಗ್ಗೆ 7 ಗಂಟೆಯಿಂದ ಸಂಜೆ 6:30 ವರಗೆ ಮತದಾನ ನಡೆಯಲಿದೆ. 1.56 ಕೋಟಿ ಮತದಾರರು ಮತದಾರರು (Vote) ಹಕ್ಕು ಚಲಾಯಿಸಲಿದ್ದಾರೆ. 699 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಫೆ. 8ಕ್ಕೆ ಫಲಿತಾಂಶ ಹೊರಬೀಳಲಿದೆ.
ಕಳೆದ 25 ವರ್ಷಗಳಿಂದಲೂ ಅಧಿಕಾರಕ್ಕೇರಲು ಬಿಜೆಪಿ ಹವಣಿಸುತ್ತಿದೆ. ಇನ್ನೊಂದೆಡೆ ದಶಕಗಳಿಂದಲೂ ತನ್ನ ಬಳಿಯೇ ಇರುವ ಅಧಿಕಾರವನ್ನು ಉಳಿಸಿಕೊಳ್ಳಲು ಆಪ್ ಪ್ರಯತ್ನಿಸುತ್ತಿದೆ. ಕಳೆದುಕೊಂಡ ಅಧಿಕಾರ ಮರಳಿ ಪಡೆಯಲು ಕಾಂಗ್ರೆಸ್ ಇನ್ನಿಲ್ಲದ ತಂತ್ರ ಮಾಡುತ್ತಿದೆ. ಹೀಗಾಗಿಯೇ ಮೂರೂ ಪಕ್ಷಗಳು ಈಗಾಗಲೇ ತಮ್ಮ ಪ್ರಾಣಾಳಿಕೆಯಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಿವೆ. ಆದರೆ, ಮತದಾರನ ಚಿತ್ತ ಮಾತ್ರ ಫೆ. 8ಕ್ಕೆ ಹೊರ ಬೀಳಲಿದೆ. ಅಲ್ಲಿಯವರೆಗೂ ಕಾಯ್ದು ನೋಡಬೇಕಿದೆ.