ಬೆಂಗಳೂರು: ರಾಜ್ಯದಲ್ಲಿನ ಮೂರು ವಿಧಾನಸಬಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಮೂರು ಕ್ಷೇತ್ರಗಳಲ್ಲಿ ಭರ್ಜರಿಯಾಗಿ ಮತದಾನ ನಡೆದಿದೆ.
ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂತ್ಯವಾಗಿದ್ದು, ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಮತದಾನ ಪ್ರಕ್ರಿಯೆ ಮುಕ್ತಾವಾಗಿದೆ. ಹಲವೆಡೆ ಸಣ್ಣಪುಟ್ಟ ಘರ್ಷಣೆ ಬಿಟ್ಟರೆ, ಇನ್ನುಳಿದಂತೆ ಮತದಾನ ಶಾಂತ ರೀತಿಯಲ್ಲಿ ನಡೆದಿದೆ.
ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಿತು. ಆದರೆ, ಈ ಯುದ್ಧದಲ್ಲಿ ಗೆಲ್ಲುವರು ಯಾರು? ಸೋಲುವರು ಯಾರು? ಎನ್ನುವುದು ತಿಳಿಯಬೇಕಾದರೆ ನ. 23ರಂದು ಹೊರ ಬೀಳಲಿದೆ. ಅಷ್ಟಕ್ಕೂ ಮೂರು ಕ್ಷೇತ್ರಗಳಲ್ಲಿ ಬಹುತೇಕ ಶಾಂತಿಯುತ ಮತದಾನ ಆಗಿದ್ದು, ಮತಪ್ರಮಾಣ ಕೂಡಾ ಹೆಚ್ಚಾಗಿದೆ. ಚನ್ನಪಟ್ಟಣದಲ್ಲಿ ಶೇ. 88.80, ಶಿಗ್ಗಾಂವಿಯಲ್ಲಿ ಶೇ. 80.48ರಷ್ಟು, ಸಂಡೂರಿನಲ್ಲಿ ಶೇ. 76.24 ರಷ್ಟು ಮತದಾನವಾಗಿದೆ ಎಂದು ಆಯೋಗ ಹೇಳಿದೆ.