ರಾಜ್ಯಾಧ್ಯಕ್ಷ ಸ್ಥಾನಕೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬಿ.ವೈ. ವಿಜಯೇಂದ್ರ ಹಾಗೂ ರೆಬೆಲ್ಸ್ ಬಣಗಳು ಆಕ್ಟಿವ್ ಆಗಿವೆ.
ರೆಬಲ್ಸ್ ತಂಡ ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದೆ. ಹೀಗಾಗಿ ವಿಜಯೇಂದ್ರ ಬಣ ಕೂಡ ಆಕ್ಟಿವ್ ಆಗಿದೆ. ರಾಜ್ಯಾಧ್ಯಕ್ಷ ಹುದ್ದೆಯನ್ನು ತಮ್ಮಲ್ಲೇ ಉಳಿಸಿಕೊಳ್ಳಬೇಕೆಂಬ ಕನಸು ಹೊತ್ತಿರುವ ವಿಜಯೇಂದ್ರ, ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದಾರೆ. ಈಗಾಗಲೇ ಪರಾಜಿತ ಬಿಜೆಪಿ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಯಲಿವೆ. ಈ ಮೂಲಕ ಚುನಾವಣಾ ತಯಾರಿ ನೆಪದಲ್ಲಿ ಕ್ಷೇತ್ರವಾರು ಮುಖಂಡರ ವಿಶ್ವಾಸಗಳಿಸಲು ವಿಜಯೇಂದ್ರ ಮುಂದಾಗಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣಾ ಸಿದ್ದತೆಗಾಗಿ ಬೆಂಗಳೂರಿನಲ್ಲಿ ಜ. 10ರಂದು ಸಭೆ ನಡೆಯಲಿದ್ದು, ತಾಪಂ, ಜಿಪಂ ಚುನಾವಣಾ ಪೂರ್ವ ತಯಾರಿ ಸಭೆ ನಡೆಯಲಿದೆ. ಈ ಮೂಲಕ ಬಿಜೆಪಿ ಜಿಲ್ಲಾ ಅಧ್ಯಕ್ಷರು, ಪದಾಧಿಕಾರಿಗಳು, ಯುವ ಮೋರ್ಚಾ, ಮಹಿಳಾ ಮೋರ್ಚಾ ಪದಾಧಿಗಳ ವಿಶ್ವಾಸ ಗಳಿಸಲು ವಿಜಯೇಂದ್ರ ಮುಂದಾಗಿದ್ದಾರೆ. ಈಗಾಗಲೇ ಪರಾಜಿತ ಅಭ್ಯರ್ಥಿಗಳು ವಿಜಯೇಂದ್ರ ಬೆನ್ನಿಗೆ ನಿಲ್ಲುವುದಾಗಿ ಹೇಳಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನ ಉಳಿಸಿಕೊಳ್ಳಲು ವಿಜಯೇಂದ್ರ ಇನ್ನಿಲ್ಲದ ತಂತ್ರ ಹೆಣೆದಿದ್ದಾರೆ.