ರಾಯಚೂರು: ಕಳಪೆ ಕಾಮಗಾರಿ ಚರಂಡಿಯಲ್ಲಿ ಬಿದ್ದು ವೃದ್ಧೆ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದಿದೆ.
60 ವರ್ಷದ ಗಂಗಮ್ಮ ಆರೋಲಿ ಮೃತಪಟ್ಟಿದ್ದಾರೆ. ಗ್ರಾಮದ ಚರ್ಚ್ ಮುಂಭಾಗದಲ್ಲಿರುವ ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ. ಗ್ರಾಮ ಪಂಚಾಯತಿ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೇ ವೃದ್ಧೆ ಸಾವಿಗೆ ಕಾರಣ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.
ಚರಂಡಿಯ ಕೆಲವು ಕಡೆ ಗುಂಡಿಗಳನ್ನು ಮುಚ್ಚದೇ ಹಾಗೆಯೇ ತೆರೆದಿಟ್ಟಿದ್ರು. ಮೂರು ತಿಂಗಳು ಕಳೆದರೂ ಕಾಲುವೆ ಕಾಮಗಾರಿ ಅರೆಬರೆ ಮಾಡಿಬಿಟ್ಟಿದ್ದರು. ಹಲವು ಬಾರಿ ಗುತ್ತಿಗೆದಾರರಿಗೆ ಕಾಮಗಾರಿ ಮುಗಿಸಲು ತಿಳಿಸಿದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ : ಬೆಳಗಾವಿಯಲ್ಲಿ ಸರ್ಕಾರಿ ವೈದ್ಯನ ಮನೆಯಲ್ಲೇ ಗಾಂಜಾ ಪತ್ತೆ | ಆರೋಗ್ಯ ಇಲಾಖೆ ನೋಟಿಸ್



















