ಬೆಂಗಳೂರು : ಬೆಂಗಳೂರಲ್ಲಿ ಖಾಸಗಿ ಬಸ್ ಹರಿದು ವೃದ್ದ ಸಾವನ್ನಪ್ಪಿರುವ ಘಟನೆ ಕೆ.ಆರ್ ಸರ್ಕಲ್ ಬಸ್ ನಿಲ್ದಾಣದ ಬಳಿ ನಡೆದಿದೆ.
ಫಾರಸ್ (75) ಸಾವನ್ನಪ್ಪಿದ ವೃದ್ದ. ಬೆಂಗಳೂರಿನಿಂದ ಕೃಷ್ಣಗಿರಿಗೆ ಖಾಸಗಿ ಬಸ್ಸೊಂದು ಹೋಗುತ್ತಿದ್ದು, ಬೈಕ್‌ಗೆ ಬಸ್ ಟಚ್ ಆಗಿದ್ದ ಪರಿಣಾಮ ಬೈಕ್ಕಿಂದ ಕೆಳಗೆ ಬಿದ್ದ ವೃದ್ಧನ ಮೇಲೆ ಬಸ್ ಹರಿದಿದೆ.
ಹಲಸೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಅಪಘಾತದಿಂದ ಕೆ.ಆರ್ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಆಗಿದೆ. ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಲು ಹರ ಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ : ಕೊಲ್ಲಂ SAI ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿ ಇಬ್ಬರು ಹುಡುಗಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!


















