ದಾವಣಗೆರೆ: ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ವೃದ್ಧನನ್ನು ರಕ್ಷಣೆ ಮಾಡಿರುವ ಘಟನೆ ದಾವಣಗೆರೆಯ ದೇವರಾಜ ಅರಸ್ ಬಡಾವಣೆ ಬಳಿ ನಡೆದಿದೆ.
ಮಗನನ್ನು ಶಾಲೆಗೆ ಬಿಡಲು ತೆರಳುತ್ತಿದ್ದ ವಿರೂಪಾಕ್ಷಪ್ಪ ಎನ್ನುವವರು ವೃದ್ಧನನ್ನು ದೂರದಿಂದ ಗಮನಿಸಿ ತಕ್ಷಣ ವೃದ್ಧನ ಬಳಿ ತೆರಳಿ ರೈಲ್ವೆ ಹಳಿ ಮೇಲೆ ಕುಳಿತಿದ್ದ ವೃದ್ಧನನ್ನು ಎಬ್ಬಿಸಿ ಕರೆತಂದು ರಕ್ಷಣೆ ಮಾಡಿದ್ದಾರೆ.
ವೃದ್ಧನನ್ನು ರಕ್ಷಿಸಿ ಕರೆತಂದ ತಕ್ಷಣವೇ ರೈಲು ಬಂದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆತ್ಮಹತ್ಯೆಗೆ ಯತ್ನಿಸಿದ ವೃದ್ಧ, ವಿನಾಯಕ ನಗರ ನಿವಾಸಿಯಾಗಿದ್ದು, ಕೌಟುಂಬಿಕ ಕಲಹಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ತಿಳಿದುಬಂದಿದೆ.