ತೆಲುಗು ನಟ ಅಲ್ಲು ಅರ್ಜುನ್ (Allu Arjun) ತಂದೆ, ನಿರ್ಮಾಪಕ ಅಲ್ಲು ಅರವಿಂದ್‌ಗೆ (Allu Aravind) ಜಾರಿ ನಿರ್ದೇಶನಾಲಯ ಸತತ 3 ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ರಾಮಕೃಷ್ಣ ಎಲೆಕ್ಟ್ರಾನಿಕ್ಸ್ ಬ್ಯಾಂಕ್‌ನಿಂದ 101.4 ಕೋಟಿ ರೂ. ಸಾಲ ಪಡೆದು ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯಿತು. ವಿಚಾರಣೆಗೆ ಹಾಜರಾಗಿದ್ದ ವೇಳೆ ಪ್ರಮುಖ ಹಣಕಾಸಿನ ದಾಖಲೆಗಳನ್ನು ಸಲ್ಲಿಸಲು ವಿಫಲರಾಗಿದ್ದರು. ಇದೀಗ ಅದರ ಮುಂದುವರಿದ ಭಾಗದ ವಿಚಾರಣೆಯಲ್ಲಿ ಅಲ್ಲು ಅರವಿಂದ್ ಹಾಜರಾಗಿದ್ದರು. ಆದರೆ, ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಇಡಿ ಸೂಚಿಸಿದೆ.
ಈ ವೇಳೆ ಮಾತನಾಡಿರುವ ಅಲ್ಲು ಅರವಿಂದ್, 2017ರಲ್ಲಿ ಆಸ್ತಿ ಖರೀದಿಸಿದ್ದೆ. ಆಸ್ತಿ ವಿಚಾರವಾಗಿ ತನಿಖೆ ಇದೆ ಎಂದು ತಿಳಿದಿರಲಿಲ್ಲ. ಬ್ಯಾಂಕ್ ಸಾಲವನ್ನು ಪಾವತಿಸಲಿಲ್ಲ. ಅಕೌಂಟ್ಸ್ ಬುಕ್‌ನಲ್ಲಿ ನನ್ನ ಹೆಸರು ಇರುವುದರಿಂದ ಇಡಿ ವಿಚಾರಣೆಗೆ ಕರೆದಿತ್ತು. ಜವಾಬ್ದಾರಿಯಿರುವ ನಾಗರಿಕರಿಗೆ ಹಾಜರಾಗಿ ವಿವರಣೆ ನೀಡಿದ್ದೇನೆ ಎದಿದ್ದಾರೆ.