ಬೆಂಗಳೂರು: ಯಾವ ಅಸಮಾಧಾನ ಇಲ್ಲ, ಗೊಂದಲ ಇಲ್ಲ ನಿನ್ನೆ ಸಭೆಯಲ್ಲಿ ಏನೂ ಗದ್ದಲ ಆಗಿಲ್ಲ. ಇದು ಜಾತಿಗಣತಿ ಅಲ್ಲಆರ್ಥಿಕ ಸಮೀಕ್ಷೆ ಎಂದು ಸಂತೋಷ್ ಲಾಡ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸಂತೋಷ್ ಲಾಡ್, ಸಾಮಾಜಿಕ ಸಮೀಕ್ಷೆ ಕುರಿತು ಇಂದು ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಕಾಂತರಾಜು ವರದಿ ತಿರಸ್ಕಾರ ಮಾಡಲು ಆಗುವುದಿಲ್ಲ, ಅದು ಕೂಡ ನಮ್ಮ ಮುಂದೆ ಇದೆ ನಿಗದಿತ ಸಮಯದಲ್ಲಿಯೇ ಈ ಸಮೀಕ್ಷೆ ನಡೆಯಲಿದೆ ಎಂದಿದ್ದಾರೆ.
ಸಮೀಕ್ಷೆಯ ಉದ್ದೇಶ ಎಲ್ಲಾ ಸಮಾಜಗಳ ಸರ್ವೆ ಮಾಡುವ ಮೂಲಕ ಬಡವರ ಸಂಖ್ಯೆ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ಜಾತಿ ಒಡೆಯುವುದು, ಜಾತಿ ಮಾಡುವುದು ಇದರ ಉದ್ದೇಶವಲ್ಲ. ದಾರಿ ತಪ್ಪಿಸುವ ಕೆಲಸ ಮಾಡುವುದು ಬೇಡ, ನಿಮ್ಮ ಅಭಿಪ್ರಾಯ ನಾವು ತೆಗೆದು ಕೊಳ್ಳುತ್ತೀವಿ ಅಂತಿಮವಾಗಿ ಸಮಿತಿ ನಿರ್ಧಾರ ಮಾಡುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ಅವರು ಕೋರ್ಟ್ ಗೆ ಹೋಗಿರುವ ವಿಚಾರವಾಗಿ ಮಾತನಾಡಿ, ಅವರಿಗೆ ಹಕ್ಕು ಇದೆ ಹೋಗಲಿ. ಧರ್ಮ ಬಿಟ್ಟವರು ನಾಳೆ ಘರ್ ವಾಪಸಿ ಆದರೆ.? ಇದರ ಬಗ್ಗೆ ಕೂಡಾ ಬಿಜೆಪಿ ಯೋಚಿಸಲಿ ಎಂದಿದ್ದಾರೆ.
ಕೆಲವು ಗೊಂದಲಗಳ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ, ಅದನ್ನು ಹೊರತುಪಡಿಸಿ ನಿಗದಿತ ದಿನಾಂಕದಂದೇ ಸಮೀಕ್ಷೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.



















