ಇಸ್ಲಾಮಾಬಾದ್: ಗಡಿಯಲ್ಲಿ ಸದಾ ಕ್ಯಾತೆ ತೆಗೆಯುತ್ತಿರುವ ಪಾಪಿ ಪಾಕ್ ಗೆ ಭೂಂಕಪನದ ಶಾಕ್ ಎದುರಾಗಿದೆ.
ಪಾಕಿಸ್ತಾನದಲ್ಲಿ(Pakistan)ನ ಹಲವು ಪ್ರದೇಶಗಳಲ್ಲಿ ಇಂದು ಭೂಕಂಪ (Earthquake) ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ (Richter Scale) 4.4 ತೀವ್ರತೆ ದಾಖಲಾಗಿದೆ ಎಂದು ತಿಳಿದು ಬಂದಿದೆ. ಭೂ ಕಂಪನದ ಅನುಭವವಾಗುತ್ತಿದ್ದಂತೆ ಬೆಚ್ಚಿ ಬಿದ್ದ ಜನರು ಭಯದಿಂದ ಹೊರಗೆ ಓಡಿ ಬಂದಿದ್ದಾರೆ.
ಪಾಕ್ ನ ಖೈಬರ್ ಪಖ್ತುನ್ಖ್ವಾದ ಸ್ವಾತ್ ಸೇರಿದಂತೆ ಹಲವೆಡೆ ಕಂಪನದ ಅನುಭವವಾಗಿದೆ. ಭಾರತ ಯಾವ ಸಂದರ್ಭದಲ್ಲಿ ಅಟ್ಯಾಕ್ ಮಾಡುತ್ತದೆ ಎಂಬ ಭಯದಲ್ಲಿರುವ ಪಾಕಿಗಳಿಗೆ, ಬಾಂಬ್ ಬಿದ್ದಿರುವ ಅನುಭವ ನೀಡಿದೆ. ಹೀಗಾಗಿ ಪಾಕಿಗಳು ಭಯದಿಂದ ಮನೆಯ ಹೊರಗೆ ಓಡೋಡಿ ಬಂದು ನೋಡಿದ್ದಾರೆ. ಪಾಕ್ ನಲ್ಲಿ ಭಾರತದ ಭಯ ಮನೆ ಮಾಡುತ್ತಿದೆ.