ನೈಪಿಡಾವ್: ಪ್ರಾರ್ಥನೆ ಮಾಡುತ್ತಿರುವಾಗಲೇ ಭೂಕಂಪ ಸಂಭವಿಸಿದ್ದರಿಂದ ಸುಮಾರು 700ಕ್ಕೂ ಅಧಿಕ ಬಂಧುಗಳು ಮೃತಪಟ್ಟಿದ್ದಾರೆ ಎಂದು ಮ್ಯಾನ್ಮಾರ್ ಮುಸ್ಲಿಂ ಸಂಘಟನೆ (Myanmar Muslim Organisation) ಹೇಳಿದೆ.
ರಂಜಾನ್ (Ramadan) ಸಮಯದಲ್ಲಿ ಮಸೀದಿಯಲ್ಲಿ (Mosques) ಪ್ರಾರ್ಥನೆ (Friday Prayer) ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಭೂಕಂಪ (Earthquake) ಸಂಭವಿಸಿದ್ದರಿಂದ ಸುಮಾರು 60 ಮಸೀದಿಗಳು ಹಾನಿಯಾಗಿವೆ. ಹಲವು ನಾಶವಾಗಿವೆ ಎಂದು ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮಾರ್ ಮುಸ್ಲಿಂ ನೆಟ್‌ವರ್ಕ್‌ನ ಸ್ಟೀರಿಂಗ್ ಕಮಿಟಿಯ ಸದಸ್ಯರಾದ ತುನ್ ಕಿ ಹೇಳಿದ್ದಾರೆ. ಭೂಕಂಪದಲ್ಲಿ ಸಾವನ್ನಪ್ಪಿದ 2 ಸಾವಿರಕ್ಕೂ ಹೆಚ್ಚು ಜನರ ಅಧಿಕೃತ ಸಂಖ್ಯೆಯಲ್ಲಿ ಸೇರಿಸಲಾಗಿದೆಯೇ ಎಂಬುವುದು ಸ್ಪಷ್ಟವಾಗಿಲ್ಲ.
ಭೂಕಂಪದ ಸಮಯದಲ್ಲಿ ಮಸೀದಿಗಳು ಉರುಳಿ ಬೀಳುವುದು ಮತ್ತು ಜನರು ಆ ಜಾಗದಿಂದ ಸುರಕ್ಷಿತ ಪ್ರದೇಶಕ್ಕೆ ಓಡಿ ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಶುಕ್ರವಾರ 7.7 ತೀವ್ರತೆಯ ಭೂಕಂಪ ಸಂಭವಿಸಿತ್ತು.