ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಗೇ ವಿದ್ಯಾಭ್ಯಾಸ ಮೊಟಕುಗೊಳಿಸುವ ಹೆಣ್ಣುಮಕ್ಕಳ ಸಂಖ್ಯೆ ಜಾಸ್ತಿಯಾಗಿರುತ್ತದೆ. ಅವರು ಮದುವೆಯಾಗಿ, ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಆದರೆ, ಇವರಿಗಾಗಿಯೇ ಭಾರತೀಯ ಜೀವ ವಿಮಾ ನಿಗಮವು (ಎಲ್ಐಸಿ) ಹೊಸ ಯೋಜನೆ ಜಾರಿಗೆ ತಂದಿದೆ. ಗ್ರಾಮೀಣ ಭಾಗದಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಮಹಿಳೆಯರು ಎಲ್ಐಸಿ ಏಜೆಂಟ್ ಆಗುವ ಮೂಲಕ ತಿಂಗಳಿಗೆ 7 ಸಾವಿರ ರೂ. ಗಳಿಸಬಹುದಾಗಿದೆ.
ಹೌದು, ಮಹಿಳೆಯರ ಸಬಲೀಕರಣಕ್ಕಾಗಿಯೇ ಎಲ್ಐಸಿ ಬಿಮಾ ಸಖಿ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಆಯ್ಕೆಯಾದ ಮಹಿಳಾ ಏಜೆಂಟರು ತಮ್ಮ ಕಾರ್ಯಕ್ಷಮತೆಯನ್ನು ಆಧರಿಸಿ ಮೊದಲ ಮೂರು ವರ್ಷಗಳವರೆಗೆ ಮಾಸಿಕ ಸ್ಟೈಫಂಡ್ ಪಡೆಯಲಿದ್ದಾರೆ. ಮೊದಲ ವರ್ಷದಲ್ಲಿ ಪ್ರತಿ ತಿಂಗಳು 7,000 ರೂ. ಸ್ಥಿರ ಸ್ಟೈಫಂಡ್ ದೊರೆಯಲಿದೆ.
ಎರಡನೇ ವರ್ಷದ ನಂತರ, ಯೋಜನೆಯ ನಿಯಮಗಳ ಅನುಸಾರ ಪಾಲಿಸಿಗಳ ಸಂಖ್ಯೆ ಶೇ.65ರಷ್ಟು ಮತ್ತು ಅದಕ್ಕಿಂತ ಹೆಚ್ಚು ಇದ್ದರೆ, ತಿಂಗಳಿಗೆ 6,000 ರೂ. ಗಳಿಸಬಹುದು. ಹೆಣ್ಣುಮಕ್ಕಳು ಅರ್ಜಿ ಸಲ್ಲಿಸುವ ವೇಳೆಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು. ಗರಿಷ್ಠ ವಯೋಮಿತಿ 70 ವರ್ಷಗಳು. ಕನಿಷ್ಠ ಶೈಕ್ಷಣಿಕ ಅರ್ಹತೆ ಅಂದರೆ 10ನೇ ತರಗತಿ ಉತ್ತೀರ್ಣ ಆಗಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಎಲ್ಐಸಿಯ https://licindia.in/ ವೆಬ್ ಸೈಟ್ ಗೆ ಭೇಟಿ ನೀಡಬೇಕು
ಆನ್ ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು
ಅರ್ಜಿ ಜೊತೆ, ಗುರುತಿನ ಪತ್ರ (ಆಧಾರ್ ಕಾರ್ಡ್, ಮತದಾರರ ಗುರುತು ಪತ್ರ), ವಯಸ್ಸಿನ ಪುರಾವೆ, ವಿಳಾಸ ದಾಖಲೆ ಮತ್ತು ಶೈಕ್ಷಣಿಕ ಅರ್ಹತೆಯ ಪ್ರಮಾಣಪತ್ರಗಳನ್ನು ಲಗತ್ತಿಸಬೇಕು.
ಅರ್ಜಿಯಲ್ಲಿ ಇತ್ತೀಚಿನ ಪಾಸ್ ಪೋರ್ಟ್ ಗಾತ್ರದ ಫೋಟೋ ಅಪ್ ಲೋಡ್ ಮಾಡಬೇಕು.