ಬೆಂಗಳೂರು : ಇವರ ಹೆಸರು ” ಟೀ-ರಾಜಣ್ಣ” ಎಂದು. ಬೆಂಗಳೂರಿನ ವಿಧಾನಸೌಧದ ಹಿಂಭಾಗದಲ್ಲಿ ಸಣ್ಣದೊಂದು ಟೀ ಶಾಪ್ ಮಾಡಿಕೊಂಡು ಕಳೆದ ಹಲವು ವರ್ಷಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ಹೊರಗಡೆ ಬಿರು ಬಿಸಿಲು ಸುಡುತ್ತಿದ್ದರೆ, ಇತ್ತ ಸರ್ಕಾರಿ ನೌಕರರು ವಿವಿಧ ಇಲಾಖೆಗೆ ವಿಧಾನಸೌಧ, ರಾಜಭವನ, ಕೆಪಿಎಸ್ಸಿ ಹೀಗೆ ವಿವಿಧ ಇಲಾಖೆಗಳ ನೌಕರರು ಬಂದು ಚಹಾ ಕುಡಿಯುವ ಸ್ಥಳ ಇದು.
ಇವರನ್ನು ಎಲ್ಲರೂ ಪ್ರೀತಿಯಿಂದ ಟೀ ರಾಜಣ್ಣ ಅಂತಲೇ ಕರೆಯುತ್ತಾರೆ. ಇದೇ ಟೀ ರಾಜಣ್ಣ ತಾಯಿ ಹೃದಯಿ ಅಂದರೆ ತಪ್ಪಾಗುವುದಿಲ್ಲ. ಕಾರಣ ಏನು ಅಂದರೆ ಅವರು ಮಾಡುವ ಕೆಲಸ.
ನೋಡಿ, ಪ್ರತಿನಿತ್ಯ ಇಲ್ಲೊಂದು ಕೋತಿಗಳ ಹಿಂಡೇ ಬರುತ್ತದೆ. ಆ ಕೋತಿಗಳಿಗೆ ಉಚಿತವಾಗಿ ಹಾಲನ್ನು ಕೊಡುತ್ತಾರೆ ಈ ಟೀ ರಾಜಣ್ಣ. ಅಂದಾಜು 15 ಕೋತಿಗಳ ಹಿಂಡು ಇಲ್ಲಿಗೆ ಬರುತ್ತಿದ್ದು, ಅದಕ್ಕೆಲ್ಲಾ ಹಾಲನ್ನು ಒಂದು ಕಪ್ನಲ್ಲಿ ಕೊಡುತ್ತಾರೆ. ಎರಡ್ಮೂರು ಲೀಟರ್ನಷ್ಟು ಹಾಲನ್ನು ಈ ಕೋತಿಗಳ ಹಿಂಡು ಖಾಲಿ ಮಾಡುತ್ತದೆ. ಅದಕ್ಕೆ ದುಡ್ಡನ್ನು ಸ್ವತಃ ಟೀ ರಾಜಣ್ಣರೇ ಕೈ ಯಿಂದ ಹಾಕುತ್ತಾರೆ. ಎರಡ್ಮೂರು ಲೀಟರ್ ಅಂದರೆ 140 ರಿಂದ 150 ರೂಪಾಯಿ ಹಣ.
ಅದನ್ನು ಸಂಪೂರ್ಣವಾಗಿ ಟೀ ರಾಜಣ್ಣ ಅವರೇ ಭರಿಸುತ್ತಿದ್ದಾರೆ.
ಫುಟ್ಪಾತ್ ಮೇಲೆ ಟೀ ಅಂಗಡಿ ಹಾಕಿಕೊಂಡ ಟೀ ರಾಜಣ್ಣ, ಕೋತಿಗಳ ದಣಿವನ್ನು ನೀಗಿಸುತ್ತಿದ್ದು ನಿಜಕ್ಕೂ ಅವರ ಈ ಕೆಲಸ ಶ್ಲಾಘನೀಯ ಅಲ್ವಾ?