ಬೆಂಗಳೂರು: ಡಿಎಕ್ಸ್ ಸಿ ಕಂಪನಿಯಿಂದ 2025-26ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಘೋಷಣೆ ಮಾಡಿದೆ. ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 50 ಸಾವಿರ ರೂಪಾಯಿ ವಿದ್ಯಾರ್ಥಿ ವೇತನ ನೀಡುವುದಾಗಿ ಘೋಷಣೆ ಮಾಡಿದೆ. ವಿದ್ಯಾರ್ಥಿವೇತನಕ್ಕಾಗಿ ದೇಶಾದ್ಯಂತ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸುವವರಿಗೆ ಕಂಪನಿಯು ಕೆಲವು ಮಾನದಂಡಗಳನ್ನು ನಿಗದಿಪಡಿಸಿದೆ. ಪದವಿ ಹಂತದ STEM (ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್ ಹಾಗೂ ಮ್ಯಾತೆಮ್ಯಾಟಿಕ್ಸ್) ಕೋರ್ಸ್ನ ಯಾವುದೇ ವರ್ಷದಲ್ಲಿ ದಾಖಲಾದ ವಿದ್ಯಾರ್ಥಿನಿ ಅಥವಾ ಟ್ರಾನ್ಸ್ ಜೆಂಡರ್ ವಿದ್ಯಾರ್ಥಿಯಾಗಿರಬೇಕು. ತಮ್ಮ ಹಿಂದಿನ ತರಗತಿ ಅಥವಾ ಸೆಮಿಸ್ಟರ್ನಲ್ಲಿ ಕನಿಷ್ಠ ಶೇ.60ರಷ್ಟು ಅಂಕಗಳನ್ನು ಪಡೆದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 4 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಭಾರತದ ನಾಗರಿಕರಾಗಿರಬೇಕು. ಅಂಗವಿಕಲ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಫೋಟೋ, ಪ್ರವೇಶ ಪತ್ರ ಅಥವಾ ಸಂಸ್ಥೆಯ ಗುರುತಿನ ಚೀಟಿಯಂತಹ ಪ್ರವೇಶದ ದಾಖಲೆ, ಹಿಂದಿನ ವರ್ಷದ ಅಂಕಪಟ್ಟಿ, ಶೈಕ್ಷಣಿಕ ವರ್ಷದ ವೆಚ್ಚಗಳಿಗೆ (ಟ್ಯೂಷನ್ ಫೀ, ಹಾಸ್ಟೆಲ್ ಶುಲ್ಕ, ಪುಸ್ತಕಗಳು, ಮೆಸ್ ಶುಲ್ಕ ಇತ್ಯಾದಿ) ಪಾವತಿ ರಶೀದಿಗಳನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 12ನೇ ತರಗತಿ ಅಂಕಪಟ್ಟಿ, ಕುಟುಂಬದ ಆದಾಯದ ಪ್ರಮಾಣಪತ್ರ, ಐಡಿ ಕಾರ್ಡ್ (ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಅಥವಾ ಚಾಲನಾ ಪರವಾನಗಿ), ಬ್ಯಾಂಕ್ ಪಾಸ್ ಬುಕ್, ಟ್ರಾನ್ಸ್ ಜೆಂಡರ್ ಗುರುತು ಅಥವಾ ಅನ್ವಯವಾದರೆ ದೈಹಿಕ ಅಂಗವೈಕಲ್ಯಕ್ಕೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ನೀಡಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ https://www.buddy4study.com/scholarships ವೆಬ್ ಸೈಟ್ ಗೆ ಭೇಟಿ ನೀಡಬೇಕು.
ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು
DXC Progressing Minds Scholarship 2025-26 ವಿಭಾಗ ಆಯ್ಕೆ ಮಾಡಬೇಕು
ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಬೇಕು
ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ, ಅರ್ಜಿ ಸಲ್ಲಿಸಬೇಕು