ಚಿಕ್ಕಮಗಳೂರು : ನಮ್ಮ ಸಂಸ್ಕೃತಿ ಬಗ್ಗೆ ತಾತ್ಸಾರ ನಿದ್ದೆಯ ಭಾವನೆ ಇದೆ ಎಂದರೆ ಯೋಚನೆ ಮಾಡಬೇಕು. ಯಾವನೋ ಘಜ್ನಿ, ಗೋರಿ ಅಕ್ಬರ್, ಹುಮಾಯೂನ್, ಬಾಬರ್ ಬಂದಿದ್ದ ಎಂದು ಹೇಳಬೇಡಿ, ಬಾಬರ್ ಇಲ್ಲದೆ ಇದ್ದರೂ, ಬಾನು ಮುಷ್ತಾಕ್ ಅಂತವರು ನಮ್ಮ ನಡುವೆ ಇದ್ದಾರೆ. ನಮ್ಮ ದೇಶವನ್ನು ಉಳಿಸಿಕೊಳ್ಳಲು ಹಿಂದೂಗಳು ಜಾತಿಯನ್ನು ಬಿಟ್ಟು ಒಂದಾಗಬೇಕು ಎಂದು ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತರೀಕೆರೆ ಪಟ್ಟಣದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿಚಾರವಾಗಿ ಬಹಿರಂಗ ಭಾಷಣ ಮಾಡಿದ ಪ್ರತಾಪ್ ಸಿಂಹ, ದಸರಾ ಹಿಂದೂ ಸಂಪ್ರದಾಯದ ಪ್ರತೀಕವಾಗಿ ನಡೆಯುವ ಉತ್ಸವವಾಗಿದೆ. 9 ದಿನಗಳ ಆರಾಧನೆ ನಡೆಯುತ್ತದೆ, ತಾಯಿ ಚಾಮುಂಡೇಶ್ವರಿಗೆ ವಿವಿಧ ಅಲಂಕಾರ ಮಾಡುತ್ತಾರೆ, ಇದು ಶೇ.100ರಷ್ಟು ಧಾರ್ಮಿಕ ಕಾರ್ಯಕ್ರಮವಾಗಿದೆ.
ನಾನು ಬಾನು ಮುಷ್ತಾಕ್ ದಸರಾ ಉದ್ಘಾಟನೆ ಬಗ್ಗೆ ಮೊದಲೇ ಪ್ರತಿಕ್ರಿಯೆ ನೀಡಿದ್ದೇನೆ. ನಿಮಗೆ ವಿಗ್ರಹ ಆರಾಧನೆಯಲ್ಲಿ ನಂಬಿಕೆ ಇಲ್ಲ, ಅಲ್ಲಾ ಹು ಅಕ್ಬರ್ ಅಲ್ಲದೆ ಇರುವವರ ಬಗ್ಗೆ ನಂಬಿಕೆ ಇಲ್ಲ, ಸಿದ್ದರಾಮಯ್ಯ ಕರೆದರು ಎಂದು ನೀವು ಯಾಕೆ ಬರುತೀರಿ ಮೇಡಂ ಎಂದು ಬಾನು ಮುಷ್ತಾಕ್ ಅವರನ್ನು ಪ್ರಶ್ನೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಅದಕ್ಕೆ ಅವರು ನಾನು ಮುಸ್ಲಿಂ ಎನ್ನುವ ಕಾರಣಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ನಾವು ಮುಸ್ಲಿಂ ಎನ್ನುವ ಕಾರಣಕ್ಕೆ ಯಾರನ್ನೂ ವಿರೋಧ ಮಾಡಿಲ್ಲ, ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದು ಇದೆ ಬಿಜೆಪಿಯವರು, ಬಿಸ್ಮಿಲ್ಲಾ ಖಾನ್ ಅವರಿಗೆ ಭಾರತ ರತ್ನ ಕೊಟ್ಟಿದ್ದು ವಾಜಪೇಯಿ ಅವರು, ಸಂತ ಶಿಶುನಾಳ ಶರೀಫ್ ಅವರಿಗೆ ಭಕ್ತಿಯಿಂದ ನಡೆದುಕೊಳ್ಳುವುದು ಇದೇ ಹಿಂದೂಗಳು ಎಂದು ತಿಳಿಸಿದ್ದಾರೆ.