ಲ್ಯಾಂಡ್ ಲಾರ್ಡ್ ಸಿನಿಮಾ ಯಶಸ್ಸಿಗಾಗಿ ನಟ ದುನಿಯಾ ವಿಜಯ್ ಭರ್ಜರಿ ಪಾದಯಾತ್ರೆ ಕೈಗೊಂಡಿದ್ದಾರೆ. ಜ್ಞಾನಭಾರತಿಯಿಂದ ಗೋಪಾಲನ್ ಆರ್ಕೇಡ್‌ವರೆಗೆ ನೂರಾರು ಭೀಮ ಆರ್ಮಿ ಅಭಿಮಾನಿಗಳೊಂದಿಗೆ ವಿಜಯ್ ಪಾದಯಾತ್ರೆ ನಡೆಸಿದರು.

ತಮಾಟೆ ಬಾರಿಸಿ, ಘೋಷಣೆ ಕೂಗಿ ಲ್ಯಾಂಡ್ ಲಾರ್ಡ್ ಸಿನಿಮಾ ನೋಡಲು ನೂರಾರು ಭೀಮ ಅರ್ಮಿಯೊಂದಿಗೆ ವಿಜಯ್ ಮತ್ತು ತಂಡ ಪಾದಯಾತ್ರೆ ಹೊರಟಿದ್ದು, ಮಾರ್ಗಮಧ್ಯೆ ಅಭಿಮಾನಿಗಳ ಭಾರೀ ಬೆಂಬಲ ವ್ಯಕ್ತವಾಯಿತು. ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಈಗಾಗಲೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇಂದೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಲ್ಯಾಂಡ್ ಲಾರ್ಡ್ ಸಿನಿಮಾ ವೀಕ್ಷಿಸಲಿದ್ದು, ತಂಡಕ್ಕೆ ಮತ್ತಷ್ಟು ಬಲ ನೀಡಿದೆ. ಇದಕ್ಕೂ ಮೊದಲು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಬೆಂಬಲ ಸೂಚಿಸಿದ್ದು, ಚಿತ್ರತಂಡದ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ.
ಇದನ್ನೂ ಓದಿ : ಹಿರಿಯ ನಟ ಜಗ್ಗೇಶ್ ಭೇಟಿಯಾದ ಬಿಗ್‌ಬಾಸ್ ವಿನ್ನರ್ ಗಿಲ್ಲಿ ನಟ | ಪಳಾರ್‌ಗೆ ಸನ್ಮಾನಿಸಿದ ನವರಸ ನಾಯಕ



















