ಬೆಳಗಾವಿ : ಕುಡಿದ ಮತ್ತಿನಲ್ಲಿ ಒಬ್ಬರಿಗೊಬ್ಬರು ಕ್ಷುಲ್ಲಕ ಕಾರಣಕ್ಕೆ ದೊಣ್ಣೆ, ಕಲ್ಲುಗಳಿಂದ ಹೊಡೆದಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಆರ್ ಸಿ ನಡೆದಿದೆ.
ಮಾತಿಗೆ ಮಾತು ಬೆಳೆದು ಶೇಕರ ಮಾದರ ಮತ್ತು ವಿಶ್ವನಾಥ್ ಉಪ್ಪಾಸೆ ಹೊಡೆದಾಡಿದ್ದಾರೆ. ಈ ವೇಳೆದೃಶ್ಯ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.ಹೊಡೆದಾಟದಲ್ಲಿ ಶೇಕರ ಮಾದರ ತಲೆ ಮತ್ತು ಕೈಗೆ ಗಂಭೀರ ಗಾಯಗೊಂಡಿದ್ದು, ಅವರನ್ನು ಅಥಣಿ ಸಮುದಾಯ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಿಶ್ವನಾಥ್ ಉಪ್ಪಾಸೆ ಕೂಡ ಗಾಯಗೊಂಡಿದ್ದಾರೆ, ಆದರೆ ಗಂಭೀರತೆ ಕಡಿಮೆ ಎಂದು ತಿಳಿದುಬಂದಿದೆ.
ಘಟನೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಪೊಲೀಸರು ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ
ಇದನ್ನೂ ಓದಿ : ಮಗನಿಂದಲೇ ಹೆತ್ತ ತಂದೆ–ತಾಯಿ ಹತ್ಯೆ | ಆರೋಪಿ ಅರೆಸ್ಟ್



















