ಚಿಕ್ಕಬಳ್ಳಾಪುರ : ಹಾಸ್ಟೆಲ್‌ನಲ್ಲೇ ಮಹಿಳಾ ಅಡುಗೆ ಸಿಬ್ಬಂದಿ ಕುಡಿದ ಅಮಲಿನಲ್ಲಿ ರಂಗೀಲಾ ಡ್ಯಾನ್ಸ್ ಮಾಡಿದ್ದಾರೆ. ಮಕ್ಕಳ ಎದುರೇ ಕುಡಿದು ಅಸಭ್ಯವಾಗಿ ವರ್ತಿಸಿರುವ ಘಟನೆ ಚಿಕ್ಕಬಳ್ಳಾಪುರದ ಚೇಳೂರು ತಾಲೂಕಿನ ಚಾಲುವೇಲು ಗ್ರಾಮದಲ್ಲಿ ಇರುವ ವಸತಿ ನಿಲಯದಲ್ಲಿ ನಡೆದಿದೆ.
ಕೆಲ ತಿಂಗಳ ಹಿಂದೆಯೇ ಘಟನೆ ನಡೆದಿದೆ ಎನ್ನಲಾದ ವೀಡಿಯೋ ಇದೀಗ ವೈರಲ್ ಆಗಿದೆ. ಅಡುಗೆ ಸಿಬ್ಬಂದಿಯ ಒಳಜಗಳದಿಂದ ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಮದ್ಯಪಾನ ಮಾಡಿರುವುದು ಸ್ಪಷ್ಟವಾದ ಹಿನ್ನೆಲೆಯಿಂದ ಅಡುಗೆ ಸಿಬ್ಬಂದಿ ಸರೋಜಮ್ಮನನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ತಾಲೂಕು ಅಧಿಕಾರಿ ಮಂಜುಳಾ ಅಧಿಕಾರ ವೈಫಲ್ಯ ಹಿನ್ನಲೆ ಅಡುಗೆ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದಾಳೆ ಎನ್ನಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಡಿಡಿ ತೇಜಾರೆಡ್ಡಿಯವರು ಇದೀಗ ಈಕೆಯನ್ನ ಅಮಾನತು ಮಾಡಿದ್ದಾರೆ.
ಿದನ್ನೂ ಓದಿ : ಮಹಾರಾಷ್ಟ್ರದ ‘ದಾದಾ’ಗೆ ಅಂತಿಮ ವಿದಾಯ | ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಅಜಿತ್ ಪವಾರ್ ಅಂತ್ಯಕ್ರಿಯೆ!



















