ಬೆಂಗಳೂರು : ಬೆಂಗಳೂರಿನ ಹೊರವಲಯವಾದ ಬಾಗಲೂರು ಸಮೀಪದ ರಸ್ತೆಯಲ್ಲಿ ವ್ಯಕ್ತಿಯೊಬ್ಬನು ನಡುರಸ್ತೆಯಲ್ಲೇ ಪ್ರಜ್ಞೆ ತಪ್ಪಿದಂತೆಯೇ ನಿಂತಿದ್ದ ಕುಡಿತದ ನಶೆಯಿಂದನೋ ಅಥವಾ ಡ್ರಗ್ಸ್ ನಶೆಯಿಂದನೋ ಎಂಬ ಅನುಮಾನ ಸ್ಥಳೀಯರಲ್ಲಿ ಹುಟ್ಟಿತ್ತು.
ಘಟನೆಯ ವೇಳೆ ವ್ಯಕ್ತಿ ತಾನು ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ ಎಂಬ ಅರಿವು ಇಲ್ಲದಂತೆಯೇ ನಿಂತಿದ್ದಾನೆ. ದೇಹದ ಮೇಲೆ ನಿಯಂತ್ರಣವೇ ಇಲ್ಲದೇ ಮುಂದೆ ಒಂದು ಹೆಜ್ಜೆಯು ಇಡಲಾಗದೇ ನಿಂತುಬಿಟ್ಟಿದ್ದಾನೆ.
ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೆಲವರು ಇದು ಮದ್ಯದ ನಶೆಯ ಪರಿಣಾಮವೋ, ಅಥವಾ ಮಾದಕ ವಸ್ತುಗಳ ಪರಿಣಾಮವೋ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ಇನ್ನು ಕೆಲ ನೆಟ್ಟಿಗರು ಜೊಂಬೀ ಸಿನಿಮಾಗಳಲ್ಲಿ ಕಾಣುವ ಪಾತ್ರದಂತೆಯೇ ವರ್ತನೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿದ್ದು, ಇಂತಹ ಸಂದರ್ಭಗಳಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಹಾಗೂ ಅಗತ್ಯ ಸಹಾಯ ಒದಗಿಸುವುದು ಮುಖ್ಯವಾಗಿದೆ ಎಂದಿದ್ದಾರೆ.


















