ಬೆಂಗಳೂರು : ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿದ್ದ ಯುವಕನ ಕೊಲೆಯಾಗಿದೆ. ಉಲ್ಲಾಳ ಉಪನಗರದ ರಾಮಚಂದ್ರಪ್ಪ ಲೇಔಟ್ ನಲ್ಲಿ ಈ ಘಟನೆ ನಡೆದಿದೆ.
ಸಂಬಂಧಿ ಯುವಕನ ತಾಯಿಗೆ ಬೈದಿದ್ದಕ್ಕೆ ಬೈಕ್‌ನ ಕಬ್ಬಿಣದ ಕ್ರಾಸ್ ಗಾರ್ಡ್ ರಾಡ್ ನಿಂದ ತಲೆಗೆ, ಬಿನ್ನಿಗೆ ಹೊಡೆದು ಕೊಲೆಗೈದಿದ್ದಾನೆ. ಅವಿನಾಶ್ (36)ಎಂಬಾತನನ್ನ ಕಾರ್ತಿಕ್ ಎಂಬುವವನು ಕೊಲೆ ಮಾಡಿದ್ದಾನೆ.
ಡಿಸಿಪಿ ಅನಿತಾ ಹದ್ದಣ್ಣವರ್ ಹೇಳಿಕೆಯ ಪ್ರಕಾರ, ನಿನ್ನೆ ರಾತ್ರಿ 10.30 ರ ಸುಮಾರಿಗೆ ಘಟನೆ ಆಗಿದೆ. ಕೊಲೆಯಾದ ಯುವಕ ರಾತ್ರಿ ಕುಡಿದು ಬಂದಿದ್ದಾನೆ. ಮನೆಯಲ್ಲಿ ಆರೋಪಿ ತಾಯಿಗೆ ಕೆಟ್ಟದಾಗಿ ಬೈದಿದ್ದಾನೆ. ಆರೋಪಿ ಕಾರ್ತಿಕ್ ಹೊರಗಡೆ ಹೋಗಿದ್ದ. ಅವಿನಾಶ್ ಬೈಯೋದನ್ನ ನೋಡಿ ತಾಯಿ ಪೋನ್ ಮಾಡಿದ್ದಾರೆ. ಬೈಕ್ ನಲ್ಲಿ ಬಂದ ಆರೋಪಿ ಬೈಕ್ ರಾಡ್ ತೆಗೆದು ತಲೆಗೆ ಹೊಡೆದಿದ್ದಾನೆ. ಅವಿನಾಶ್ ಗೆ ಮದುವೆಯಾಗಿ ಎರಡು ಮಕ್ಕಳಿವೆ. ಕುಡಿತದ ಚಟ ನೋಡಿ ಹೆಂಡತಿ ತವರಿಗೆ ಹೋಗಿದ್ದಳು. ಕೊಲೆ ಬಳಿಕ ತಾಯಿ ಮಗ ರಕ್ಷಣೆ ಮಾಡೋಕೆ ಪ್ರಯತ್ನ ಪಟ್ಟಿದ್ದಾರೆ. ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾನೆ. ಬಳಿಕ ಕಾರ್ತಿಕ್ 112 ಗೆ ಕರೆ ಮಾಡಿದ್ದಾನೆ.
ಈ ಪ್ರಕರಣವು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಬ್ರೆಜಿಲ್ ಮೂಲದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ | ಡೆಲಿವರಿ ಬಾಯ್ ಬಂಧನ!



















