ಬೆಂಗಳೂರು | ನಗರದಲ್ಲಿ ಮತ್ತೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಕುಡಿದ ಅಮಲಿನಲ್ಲಿ ವಿದೇಶಿ ಪ್ರಜೆಯೊಬ್ಬ ಮಧ್ಯರಸ್ತೆಯಲ್ಲಿ ರಂಪಾಟ ನಡೆಸಿದ್ದಾರೆ. ಈ ಘಟನೆ ಬ್ರಿಗೇಡ್ ರಸ್ತೆಯಲ್ಲಿ ರಾತ್ರಿ ಸುಮಾರು 1 ಗಂಟೆ ವೇಳೆಗೆ ನಡೆದಿದೆ.
ಮದ್ಯದ ಮತ್ತಿನಲ್ಲಿ ಇದ್ದ ಫಾರಿನರ್ ರಸ್ತೆ ಮಧ್ಯೆ ನಿಂತು ವಾಹನಗಳಿಗೆ ಅಡ್ಡಗಟ್ಟಿ ಗೊಂದಲ ಸೃಷ್ಟಿಸಿದ್ದು, ವಾಹನ ಸವಾರರ ಜೊತೆ ಜಗಳವಾಡಿ ಸಂಚರಿಸುತ್ತಿದ್ದ ಜನರಿಗೆ ತೊಂದರೆ ಉಂಟುಮಾಡಿದ್ದಾನೆ. ಈತನ ವರ್ತನೆಯಿಂದ ಕೆಲವರು ಭಯಭೀತರಾಗಿದ್ದು, ಪರಿಸ್ಥಿತಿ ತೀವ್ರಗೊಂಡಿತ್ತು.
ಘಟನೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಯತ್ನಿಸಿದಾಗ, ಫಾರಿನರ್ ಪೊಲೀಸರ ಹೊಯ್ಸಳ ವಾಹನದ ಮೇಲೂ ಬಿದ್ದು ಒದ್ದಾಡದ್ದಾನೆ. ಸುಮಾರು 2 ಗಂಟೆಗಳ ಕಾಲ ರಸ್ತೆ ಮಧ್ಯೆ ನಿಂತು ಗಲಾಟೆ ಮಾಡಿದ ಬಳಿಕ, ಪೊಲೀಸರು ಆತನಿಗೆ ಮನವರಿಕೆ ಮಾಡಿ ಸ್ಥಳದಿಂದ ಕಳುಹಿಸಿದ್ದಾರೆ.
ಇದನ್ನೂ ಓದಿ : ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ – ಜೂಜುವಾಡಿ ಚೆಕ್ಪೋಸ್ಟ್ನಲ್ಲಿ 2.34 ಕೋಟಿ ರೂ. ಹಣ ಸೀಜ್



















