ಬೆಂಗಳೂರು: ಅಂಚೆ ಕಚೇರಿಗೆ ಕೋರಿಯರ್ ಬಾಕ್ಸ್ ನಲ್ಲಿ ಡ್ರಗ್ಸ್ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಚಾಮರಾಜಪೇಟೆ ವಿದೇಶಿ ಅಂಚೆ ಕಚೇರಿಗೆ (Chamrajpet Post Office) ಕೋರಿಯರ್ ಬಾಕ್ಸ್ ನಲ್ಲಿ ಡ್ರಗ್ಸ್ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ (CCB) ಪೊಲೀಸರ ತನಿಖೆಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಡ್ರಗ್ಸ್ (Durg) ಕೊರಿಯರ್ ಬಾಕ್ಸ್ಗಳ ಮೇಲಿನ ವಿಳಾಸ ನಕಲಿಯಾಗಿವೆ. ತಪ್ಪಾದ ವಿಳಾಸ ನೀಡಿದರೂ ಕೊರಿಯರ್ ನಲ್ಲಿದ್ದ ಡ್ರಗ್ಸ್ ಪ್ಯಾಕೆಟ್ ಗಳನ್ನು ಡೀಲರ್ ಗಳು ಪಡೆಯುತ್ತಿದ್ದರು ಎನ್ನಲಾಗಿದೆ.
ಪೆಡ್ಲರ್ಸ್ಗಳು ಮನೆಯಲ್ಲೇ ಕುಳಿತು ತಪ್ಪಾದ ವಿಳಾಸ ನೀಡಿ ಆನ್ಲೈನ್ನಲ್ಲಿ ಡ್ರಗ್ಸ್ ಬುಕ್ ಮಾಡಿ ಅಂಚೆ ಮೂಲಕ ತರಿಸಿಕೊಳ್ಳುತ್ತಿದ್ದರು. ವಿದೇಶದಿಂದ ಬಂದ ಪ್ಯಾಕೇಟ್ಗಳು ಕೊರಿಯರ್ ಏಜೆನ್ಸಿಗೆ ತಲುಪುತಿದ್ದವು. ಏಜೆನ್ಸಿಗೆ ತಲುಪಿದ ನಂತರ ಪೆಡ್ಲರ್ಗೆ ಡೆಲವರಿ ಟ್ರ್ಯಾಕಿಂಗ್ ಮಾಹಿತಿ ಹೋಗುತ್ತಿತ್ತು. ತಪ್ಪಾದ ವಿಳಾಸಕ್ಕೆ ಡ್ರಗ್ಸ್ ಡೆಲವರಿಯಾಗುವ ಮುನ್ನ ಟ್ರಾಕಿಂಗ್ ಮಾಹಿತಿ ಆಧರಿಸಿ ಡ್ರಗ್ಸ್ ಬಾಕ್ಸ್ ಅನ್ನು ಪಡೆಯುತ್ತಿದ್ದರು.
ಅಲ್ಲದೇ, ಡೆಲವರಿ ಸಿಬ್ಬಂದಿಗಳು, ವಿಳಾಸ ಸಿಗದೆ ವಾಪಾಸ್ ಕೊರಿಯರ್ ಏಜೆನ್ಸಿಗೆ ಬಾಕ್ಸ್ ನ್ನು ತೆಗೆದುಕೊಂಡು ಹೊಗುತಿದ್ದರು. ನಂತರ ಪೆಡ್ಲರ್ ಗಳು ತೆರಳಿ ಏಜೆನ್ಸಿಗೆ ತೆರಳಿ ಕೊರಿಯರು ಪಡೆಯುತ್ತಿದ್ದರು ಎನ್ನಲಾಗಿದೆ.
ಸಿಸಿಬಿ ಪೊಲೀಸರು ಸೆಪ್ಟೆಂಬರ್ 9ರಂದು ಚಾಮರಾಜಪೇಟೆ ವಿದೇಶಿ ಅಂಚೆ ಕಚೇರಿ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ 606 ಮಾದಕ ವಸ್ತು ಇರುವ ಪಾರ್ಸಲ್ ಪ್ಯಾಕೇಟ್ಗಳು ಪತ್ತೆಯಾಗಿದ್ದವು. ಥೈಲ್ಯಾಂಡ್, ಯುಎಸ್, ಯುಕೆಯಿಂದ ಡ್ರಗ್ಸ್ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 12 ಪ್ರಕರಣ ದಾಖಲಿಸಿಕೊಂಡಿದ್ದು, ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.