ಮೈಸೂರು : ಸಾಂಸ್ಕೃತಿಕ ನಗರಿ ಎಂದೇ ಖ್ಯಾತಿ ಗಳಿಸಿರುವ ಮೈಸೂರಿನಲ್ಲಿ ಡ್ರಗ್ಸ್ ಜಾಲ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಮಹಾರಾಷ್ಟ್ರ ಪೊಲೀಸರ ದಾಳಿ ನಡೆಸಿದ ಸ್ಥಳಕ್ಕೆ ಮೈಸೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಿಂಗ್ ರಸ್ತೆ ಸೇರಿ ಅಕ್ರಮ ಡ್ರಗ್ಸ್ ಗೋಡೋನ್ ಸುತ್ತಮುತ್ತ ಪೊಲೀಸರು ಬಿಗಿ ತಪಾಸಣೆ ನಡೆಸಿದ್ದು, ಡ್ರಗ್ಸ್ ಪತ್ತೆಯಾದ ಸಮೀಪದಲ್ಲಿರುವ ಬಡಾವಣೆಗಳಲ್ಲಿ ಪೊಲೀಸರು ತಲಾಶ್(ಅನ್ವೇಶಣೆ) ಮಾಡಿದ್ದಾರೆ.
ಮೈಸೂರು ನಗರ ಪೊಲೀಸರು ನಾಕಾಬಂದಿ ಹಾಕಿದ್ದು, ನಗರದ ನಾಲ್ಕು ಕಡೆ, ರಿಂಗ್ ರಸ್ತೆ, ಪ್ರಮುಖ ವೃತ್ತ, ರಸ್ತೆಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ.
ತಡರಾತ್ರಿಯಲ್ಲೂ ಕಮಿಷನರ್, ಡಿಸಿಪಿ, ಎಸಿಪಿ ಅಧಿಕಾರಿಗಳು ಸೇರಿ ಪೊಲೀಸರು ತಪಾಸಣೆ ಮಾಡಿದ್ದಾರೆ.
ಮೈಸೂರು ನಗರದಲ್ಲಿ ಬಾರಿ ಪ್ರಮಾಣದ ಡ್ರಗ್ಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲ ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ ನಡೆಸಿದ ಬೆನ್ನಲ್ಲೆ ಮೈಸೂರು ಪೊಲೀಸರ ಎಚ್ಚರಗೊಂಡಿದ್ದು ತಪಾಸಣೆಗಿಳಿದಿದ್ದಾರೆ.
ಮೈಸೂರು ವಲಯ ನಂ. 1 ರ ವ್ಯಾಪ್ತಿಯ ಉನ್ನತಿನಗರ, ಬೆಲವತ್ತ ಗ್ರಾಮ, ಒಂದೇ ಮಾತರಂ ಕಾಲೋನಿ, ಸಾಯಿ ಬಾಬಾ ಕಾಲೋನಿ ಮತ್ತು ಯಲ್ಲಮ್ಮ ಕಾಲೋನಿಗಳಲ್ಲಿ ಗಸ್ತು ತಿರುಗುತ್ತಿದ್ದು, ಅಬಕಾರಿ ಇಲಾಖೆ ಅಧಿಕಾರಿಗಳೂ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.
ಅನುಮಾನಸ್ಪದ ಬೈಕ್, ಕಾರುಗಳ ತಪಾಸಣೆ ಮಾಡುತ್ತಿರುವುದಲ್ಲದೇ, ಪ್ರಮುಖ ಬಡಾವಣೆಗಳ ಅಜ್ಞಾತ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ.