ಬೆಂಗಳೂರು | ಬೆಂಗಳೂರು ಉತ್ತರ ಭಾಗದ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿ ಸಿಟಿಯಲ್ಲಿರುವ ಕಾಫಿ ಶಾಪ್‌ನಲ್ಲಿ ನಿನ್ನೆ ರಾತ್ರಿ ಆಘಾತಕಾರಿ ಘಟನೆಯೊಂದು ನಡೆದಿದೆ.
ಆಗಿದ್ದೇನು?
ಕೆಲ ಪುಂಡ ಯುವಕರು ಕಾಫಿ ಶಾಪ್ ಬಳಿಯೇ ಸಿರಿಂಜ್ ಮೂಲಕ ಡ್ರಗ್ ಇಂಜೆಕ್ಟ್ ಮಾಡಿಕೊಳ್ಳುತ್ತಿರುವುದು ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ದೃಶ್ಯ ಗಮನಿಸಿದ ಕಾಫಿ ಶಾಪ್ ಸಿಬ್ಬಂದಿ, ಯುವಕರನ್ನು ಪ್ರಶ್ನಿಸಿ, ಅಲ್ಲಿಂದ ತೆರಳುವಂತೆ ಎಚ್ಚರಿಕೆ ನೀಡಿದ್ದರು. ಜೊತೆಗೆ ಯುವಕರ ಸಂಬಂಧಿಕರಿಗೂ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಇಷ್ಟಕ್ಕೆ ಕೋಪಗೊಂಡ ಯುವಕರ ಗುಂಪು, ಕಾಫಿ ಶಾಪ್ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಪ್ರತಿಯಾಗಿ ಹೋಟೆಲ್ ಸಿಬ್ಬಂದಿಗಳು ಕೂಡ ಪ್ರತಿ ಹಲ್ಲೆ ನಡೆಸಿದ್ದು, ಕುರ್ಚಿ ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳಿಂದ ಪರಸ್ಪರ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಸ್ಥಳದಲ್ಲಿ ಕೆಲಲಲಲಲಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸದ್ಯ ಘಟನಾ ಸಂಬಂಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಮಂಗಳೂರು | ಫಲ್ಗುಣಿ ನದಿಯಲ್ಲಿ ದೋಣಿ ಮಗುಚಿ ಇಬ್ಬರು ಸಾವು, ಇನ್ನೋರ್ವ ಪಾರು!



















