ಖಾಸಗಿ ವಾಹನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ನಲ್ಲಿ ಗಗನ ಹಾಗೂ ಡ್ರೋನ್ ಪ್ರತಾಪ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಡ್ರೋನ್ ಪ್ರತಾಪ್ ಗಗನಗೋಸ್ಕರ ಉರುಳು ಸೇವೆ ಮಾಡಿ ಜನಮೆಚ್ಚುಗೆ ಗಳಿಸಿದ್ದಾರೆ.
ಮಹಾನಟಿ ಮೂಲಕ ಪ್ರೇಕ್ಷಕರ ಮನಗೆದ್ದ ನಟಿ ಗಗನ ವೇದಿಕೆ ಮೇಲೆ ಡ್ರೋನ್ ಪ್ರತಾಪ್ ಕಾರ್ಯಕ್ಕೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಪ್ರತಾಪ್ ಗೆ ಮೆಂಟರ್ ಆಗಿರುವ ಗಗನ ಈ ವಾರದ ಡೆಡಿಕೇಷನ್ ರೌಂಡ್ ಗೆ ಫುಲ್ ಫಿದಾ ಆಗಿದ್ದಾರೆ.
ಡ್ರೋನ್ ಪ್ರತಾಪ್ ʻಭರ್ಜರಿ ಬ್ಯಾಚುಲರ್ಸ್ʼ ಶುರುವಿನಿಂದಲೂ ಮೆಂಟರ್ ಗಗನಾಗೆ ಒಂದಲ್ಲಾ ಒಂದು ಸರ್ಪ್ರೈಸ್ ನ್ನು ನೀಡುತ್ತಲೇ ಬಂದಿದ್ದಾರೆ. ಈ ಹಿಂದೆ ಗಿಲ್ಲಿ ನಟನ ಜೊತೆಗೆ ಗಗನ ಹೆಸರು ಕೇಳಿ ಬಂದಿದ್ದು, ಇಬ್ಬರೂ ಕೂಡ ಲವ್ ಮಾಡುತ್ತಿದ್ದಾರೆಂಬ ಸುದ್ದಿ ಹಬ್ಬಿತ್ತು. ಇಬ್ಬರ ಕಾಂಬಿನೇಷನ್ ಚೆನ್ನಾಗಿ ವರ್ಕ್ ಆಗಿತ್ತು.
ಇನ್ನು ತಾನು ಕಟ್ಟಿಕೊಂಡ ಹರಕೆಯ ಬಗ್ಗೆ ಡ್ರೋನ್ ಪ್ರತಾಪ್ ಹೇಳಿಕೊಂಡಿದ್ದು, ಗಗನಾಗೆ ಕನ್ನಡ ಚಿತ್ರರಂಗದಲ್ಲಿ ಬೆಳೆಯಬೇಕು. ಅವರ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳದೇ ಇರಲಿ ಎಂದು ಉರುಳು ಸೇವೆ ಮಾಡಿರುವೆ ಎಂದು ಹೇಳಿಕೊಂಡಿದ್ದಾರೆ. ಪ್ರತಾಪ್ ಡೆಡಿಕೇಷನ್ ಗೆ ಗಗನ ಫುಲ್ ಕಣ್ಣೀರು ಹಾಕಿದ್ದು, ನನ್ನ ವೀಕ್ ನೆಸ್ , ಫ್ರೆಂಡ್ ಎಲ್ಲ ದೇವರೆ. ನಾನು ಬೇಜಾರಾದಾಗ ಮೊಬೈಲ್ ನೋಡಿ ಯಾರಿಗೆ ಕಾಲ್ ಮಾಡಲಿ ಅಂತ ಚಿಂತಿಸುವೆ. ಆದರೆ, ಯಾರೂ ನನಗೆ ಸಿಗಲ್ಲ. ನನ್ನ ಮೊಬೈಲ್ ವಾಲ್ ಪೇಪರ್ ನಲ್ಲಿರುವ ರಾಯರೇ ನನ್ನ ಫ್ರೆಂಡ್ ಅಂತ ಹೇಳುತ್ತಾರೆ.