ನವದೆಹಲಿ: ಇಸ್ರೇಲ್ ಸರ್ಕಾರಿ ಅಧಿಕಾರಿಗಳು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆಯ ಕಡೆಗೆ ಡ್ರೋನ್ ನ್ನು ಉಡಾಯಿಸಿರುವುದು ದೃಢಪಟ್ಟಿದೆ.
ಇಸ್ರೇಲ್‌ನ ಉನ್ನತ ಮಟ್ಟದ ವಾಯು ಭದ್ರತೆಯನ್ನು ದಾಟಿದ ಡ್ರೋನ್ ಅನ್ನು ಲೆಬನಾನ್‌ನಿಂದ ಕಳುಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಿವಾಸದ ಕಡೆಗೆ ಡ್ರೋನ್ ಉಡಾವಣೆಯಾಗಿವೆ.
ಇಸ್ರೇಲ್ನ ಮಾಧ್ಯಮಗಳ ವರದಿಯಂತೆ, ಘಟನೆ ನಡೆದ ಸಮಯದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಅವರ ಪತ್ನಿ ಇಬ್ಬರೂ ಮನೆಯಲ್ಲಿ ಇರಲಿಲ್ಲ. ಈ ಡ್ರೋನ್ ದಾಳಿಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಲೆಬನಾನ್‌ನಿಂದ ಉಡಾವಣೆಯಾದ ಡ್ರೋನ್ ದಕ್ಷಿಣ ಹೈಫಾದ ಸಿಸೇರಿಯಾದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಬಳಿ ಇಂದು ಸ್ಫೋಟಗೊಂಡಿದೆ.