ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಉಬರ್ ಪಾರ್ಕಿಂಗ್ ಲಾಟ್ ನಲ್ಲಿ ಉಬರ್ ಸಂಸ್ಥೆ ವಿರುದ್ದ ಟ್ಯಾಕ್ಸಿ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.
ಉಬರ್ ಸಂಸ್ಥೆಯ ಮ್ಯಾನೇಜರ್ ಎಕ್ಸೆಲ್ ವಾಹನಗಳಿಗೆ ಟ್ರಿಪ್ ನೀಡದೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಕೇವಲ ಎಲೆಕ್ಟ್ರಿಕಲ್ ಕಾರುಗಳಿಗೆ ಮಾತ್ರ ಹೆಚ್ಚು ಬಾಡಿಗೆ ನೀಡಲಾಗುತ್ತಿದೆ. ಇದರಿಂದಾಗಿ ಹತ್ತಾರು ವರ್ಷಗಳಿಂದ ಉಬರ್ ಸಂಸ್ಥೆ ನಂಬಿಕೊಂಡು ದುಡಿಯುತ್ತಿರುವ ಚಾಲಕರಿಗೆ ಕಿರುಕುಳ ಎದುರಾಗುತ್ತಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ.