ಬೆಂಗಳೂರು: ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿ ಟೋಲ್ ಗೇಟ್ ನಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ.
ಟೋಲ್ ಹಣ ಪಾವತಿ ಮಾಡದ ವಾಹನ ಚಾಲಕನನ್ನು ಟೋಲ್ ಸಿಬ್ಬಂದಿ ಬೆನ್ನಟ್ಟಿ ಹೋಗಿ ಟಾಟಾ ಏಸ್ ವಾಹನಕ್ಕೆ ಟೋಲ್ ಸಿಬ್ಬಂದಿ ನೇತಾಡುತ್ತಿದ್ದ, ಹಾಗೆಯೆ ಎಳೆದುಕೊಂಡು ಹೋಗಿರುವ ಭಯಾನಕ ದೃಶ್ಯ ಮೊಬೈಲ್ ವೀಡಿಯೊದಲ್ಲಿ ಸೆರೆಯಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಟೋಲ್ ನಿಂದ ಹೊಸೂರು ಮಾರ್ಗವಾಗಿ ಬರುತ್ತಿದ್ದ ಟಾಟಾ ಏಸ್ ಚಾಲಕ ಟೋಲ್ ಹಣ ಪಾವತಿ ಮಾಡದೆ ಮೊಂಡಾಟ ಮಾಡಿದ್ದಾನೆ. ಈ ವೇಳೆ ಟೋಲ್ ಸಿಬ್ಬಂದಿ ವಾಹನವನ್ನು ಅಡ್ಡಗಟ್ಟಿ ನಿಂತುಕೊಂಡ. ಆದರು ವಾಹನವನ್ನು ನಿಲ್ಲಿಸಿದೆ ಹೋಗಲು ಚಾಲಕ ಮುಂದಾಗಿದ್ದಾನೆ.
ಟೋಲ್ ಸಿಬ್ಬಂದಿ ಕಾರಿನ ಮುಂಬದಿಯ ಡೋರ್ ಹಿಡಿದು ನೇತಾಡಿದರೂ ಸಹ ಹೆದ್ದಾರಿಯಲ್ಲಿ ವಾಹನಗಳ ನಡುವೆಯೆ ಕಾರನ್ನು ಚಲಾಯಿಸಿದ್ದಾನೆ. ಕೊನೆಗೆ ರಸ್ತೆಯಲ್ಲಿ ಟೋಲ್ ಸಿಬ್ಬಂದಿ ಬಿದ್ದಿದ್ದಾನೆ. ಈ ಬೆಚ್ಚಿ ಬೀಳಿಸುವ ದೃಶ್ಯ ಹಿಂದಿನ ಕಾರಿನ ಚಾಲಕರ ಮೊಬೈಲ್ ನಲ್ಲಿ ಸೆರೆಯಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.