ಬೆಂಗಳೂರು: ಬಿಎಂಟಿಸಿ ಬಸ್ ಚಾಲಕನೊಬ್ಬ ಬಿರಿಯಾನಿ ಪಾರ್ಸೆಲ್ (Biriyani Parcel) ಪಡೆಯುವುದಕ್ಕಾಗಿ 15 ನಿಮಿಷ ಬಸ್ ನಿಲ್ಲಿಸಿ, ದುರ್ವರ್ತನೆ ತೋರಿರುವ ಘಟನೆ ನಡೆದಿದೆ.
ಬಿಎಂಟಿಸಿ (BMTC) ಚಾಲಕನ ಈ ಕೃತ್ಯದ ವಿರುದ್ಧ ಪ್ರಯಾಣಿಕರು ಗರಂ ಆಗಿದ್ದಾರೆ. ಬಿಎಂಟಿಸಿ ಬಸ್ ಟ್ಯಾನರಿ ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ವರ್ತನೆ ನಡೆದಿದೆ.
ಟ್ಯಾನರಿ ರಸ್ತೆಯಲ್ಲಿ 10-15 ನಿಮಿಷ ಬಸ್ ನಿಲ್ಲಿಸಿ ಬಿರಿಯಾನಿ ಪಾರ್ಸೆಲ್ ತೆಗೆದುಕೊಂಡಿದ್ದಾರೆ. ಇದನ್ನು ಕಂಡ ಪ್ರಯಾಣಿಕರು ಬಿಎಂಟಿಸಿ ವಿರುದ್ಧ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಕೊನೆಯ ಬಸ್, ಮೆಜೆಸ್ಟಿಕ್ ಕಡೆಗೆ ಬಂದು ಬೇರೆ ಕಡೆಗೆ ಹೋಗಬೇಕು.
ಈ ರೀತಿ ಬಿರಿಯನಿಗಾಗಿ ಬಸ್ ನಿಲ್ಲಿಸಿಕೊಂಡು ಸಮಸ್ಯೆ ಮಾಡುತ್ತಿದ್ದಾರೆ ಎಂದು ಪೋಸ್ಟ್ ನಲ್ಲಿ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.