ಬೆಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಂಪೌಂಡ್‌ಗೆ ಗುದ್ದಿರುವ ಘಟನೆ ಬಸವನಗುಡಿ ಸಂಚಾರ ಠಾಣಾ ವ್ಯಾಪ್ತಿಯ ವಾಸವಿ ರೋಡ್ ನಲ್ಲಿ ನಡೆದಿದೆ.
ಮರ್ಸಿಡಿಸ್ ಬೆನ್ಸ್ ಕಾರೊಂದು ಅತೀ ವೇಗವಾಗಿ ಬಂದಿದ್ದು, ನಿಯಂತ್ರಣ ಸಿಗದೇ ಕಾಂಪೌಂಡ್‌ಗೆ ಗುದ್ದಿದ್ದಾನೆ ಅದೃಷ್ಟಾವಶಾತ್ ಜೀವಾಪಾಯದಿಂದ ಪಾರಾಗಿದ್ದಾನೆ. ಈ ಕಾರು ಛತ್ತೀಸ್ ಘಡ್ ರಿಜಿಸ್ಟ್ರೇಷನ್ ನೊಂದಾಣಿ ಕಾರಾಗಿತ್ತು.
ಗುದ್ದಿದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ರಸ್ತೆ ಬದಿ ಪಾರ್ಕಿಂಗ್ ಮಾಡಿದ್ದ ಎರಡು ಬೈಕ್ ಮತ್ತು ಒಂದು ಕಾರು ಜಖಂಗೊಂಡಿದೆ. ಕಾರಿನಲ್ಲಿ ಚಾಲಕ ಮಾತ್ರ ಇದ್ದು ಬೇರೆ ಯಾರು ಇರಲಿಲ್ಲ..ಸದ್ಯ ಸ್ಥಳಕ್ಕೆ ಬಸವನಗುಡಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಚಾಲಕ ಡ್ರಂಕ್ ಅಂಡ್ ಡ್ರೈವ್ ಮಾಡಿರೋ ಶಂಕೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ರಚನಾ ರೈಗೆ ಕುದುರಿದ ಚಾನ್ಸ್..! ‘ಡೆವಿಲ್ ಕ್ವೀನ್’ ಅದೃಷ್ಟ ನೋಡಿ..!


















