ಬೀದರ್ | ಬೇಸಿಗೆಗೂ ಮುನ್ನವೇ ಬೀದರ್ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದುರಾಗಿದೆ.ಕಳೆದ 15 ದಿನಗಳಿಂದ ನೀರಿಗಾಗಿ ಔರಾದ್ ತಾಲೂಕಿನ ಫುಲಸಿಂಗ್ ನಾಯಕ ತಾಂಡಾ ನಿವಾಸಿಗಳು ಪರದಾಡುತ್ತಿದ್ದಾರೆ.
ತಾಂಡಾದಲ್ಲಿ ನೀರಿಲ್ಲದ ಕಾರಣ ಸುಮಾರು 2 ಕಿ.ಮೀ. ದೂರ ಹೋಗಿ ರಸ್ತೆ ಪಕ್ಕದಲ್ಲಿರುವ ಟ್ಯಾಂಕಿನಿಂದ ನೀರನ್ನು ತಂದು ಸೋಸಿ ಕುಡಿಯುವ ಪರಿಸ್ಥಿತಿ ಉದ್ಭವವಾಗಿದ್ದು,ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಅಸಮಧಾನ ವ್ಯಕ್ತಪಡಿಸಿ, ಸಂಭಂದಿಸಿದ ಇಲಾಖಾಧಿಕಾರಿಗಳು ಕೂಡಲೇ ಈ ಸಮಸ್ಯೆ ಪರಿಹರಿಸಬೇಕೆಂದು ಗ್ರಾಮಸ್ಥರ ಒತ್ತಾಯಸಿದ್ದಾರೆ.
ಮತ್ತೊಂದೆಡೆ, ಅಧಿಕಾರಿಗಳ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯ ಕುರಿತು ಸಚಿವ ಈಶ್ವರ್ ಖಂಡ್ರೆ ಮುಂಜಾಗ್ರತಾ ಸಭೆ ನಡೆಸಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಖಂಡ್ರೆ ಸೂಚನೆ ನೀಡಿದ್ದಾರೆ.
ಔರಾದ್, ಭಾಲ್ಕಿ ಸೇರಿ ಕೆಲ ತಾಲ್ಲೂಕುಗಳ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು, ಎಲ್ಲೇ ಕುಡಿಯುವ ನೀರಿನ ಸಮಸ್ಯೆ ಇದ್ರೂ 24 ಗಂಟೆಯಲ್ಲೇ ಬಗೆಹರಿಸಬೇಕು. ಬೋರವೆಲ್ ದುರಸ್ಥಿ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಖಂಡ್ರೆ ಸೂಚನೆ ನೀಡಿದ್ದಾರೆ. ಸುಮಾರು 45 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗಬಹುದು ಎಂದು ಸಚಿವರು ಅಂದಾಜಿಸಿದ್ದಾರೆ.
ಇದನ್ನೂ ಓದಿ : ಜಿಲ್ಲಾ ನ್ಯಾಯಾಲಯದಲ್ಲಿ 14 ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನ.. 61 ಸಾವಿರ ರೂ. ಸ್ಯಾಲರಿ



















