ಬೆಂಗಳೂರು: ರಾಜ್ಯದಲ್ಲಿ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲು ರಾಜೀವ್ ಗಾಂಧಿ ವಸತಿ ಯೋಜನೆ ಜಾರಿಗೆ ತರಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಯೋಜನೆಯನ್ನು 2000ರಲ್ಲಿ ಕೇಂದ್ರ ಮತ್ತು ರಾಜ್ಯ ವಸತಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದ ಮೂಲಕ ಸಮಾಜದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ವಸತಿ ಒದಗಿಸಲು ವಿಶೇಷ ಉದ್ದೇಶಕ್ಕಾಗಿ ಜಾರಿಗೆ ತರಲಾಗಿದೆ. ಅರ್ಹತೆ ಹೊಂದಿದ ಅರ್ಜಿದಾರರಿಗೆ 1BHK ಮತ್ತು 2BHK ಮನೆಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲಾಗುತ್ತದೆ.
ಯೋಜನೆಯ ಪ್ರಯೋಜನಗಳು ಏನು?
ಕೈಗೆಟುಕುವ ಬೆಲೆಯಲ್ಲಿ ಮನೆಗಳನ್ನು ನೀಡಲಾಗುತ್ತದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಮನೆಗಳು ಲಭ್ಯ ಇರುತ್ತವೆ. ಆರ್ಥಿಕವಾಗಿ ಹಿಂದುಳಿದವರಿಗೆ ಸುರಕ್ಷಿತ ಮತ್ತು ಸ್ಥಿರವಾದ ವಾಸಸ್ಥಳ ಸಿಗಲಿದೆ. ಸರ್ಕಾರದಿಂದ ಸಬ್ಸಿಡಿ ಮತ್ತು ಸಾಲದ ಸೌಲಭ್ಯಗಳು ಸಿಗುತ್ತವೆ. ನೀರು, ವಿದ್ಯುತ್, ರಸ್ತೆ ಮತ್ತು ಶಾಲಾ ಸೌಲಭ್ಯಗಳೊಂದಿಗೆ ವಸತಿ ಕಾಲೋನಿಗಳನ್ನು ನಿರ್ಮಿಸಲಾಗುತ್ತದೆ.
ಸಾಮಾನ್ಯ ವರ್ಗದವರು ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿರಬೇಕು. ಎಸ್ಸಿ, ಎಸ್ಟಿಯವರು 1.2 ಲಕ್ಷ ರೂಪಾಯಿ ಗರಿಷ್ಠ ಆದಾಯ ಮಿತಿ ಹೊಂದಿರಬೇಕು. ಅರ್ಜಿದಾರರು ಯಾವುದೇ ಸರ್ಕಾರಿ ವಸತಿ ಯೋಜನೆಯಿಂದ ಪ್ರಯೋಜನ ಪಡೆದಿರಬಾರದು. ಮಹಿಳೆ, ವಿಶೇಷ ಚೇತನರು ಮತ್ತು ಸೀನಿಯರ್ ಸಿಟಿಜನ್ ಗಳಿಗೆ ಆದ್ಯತೆ ನೀಡಲಾಗುತ್ತದೆ.
ಯಾವ ದಾಖಲೆ ಬೇಕು?
ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್, ಪಾಸ್ಟ್ ಪೋರ್ಟ್ ಸೈಜಿನ ಫೋಟೊ, ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ.
ಅರ್ಜಿ ಸಲ್ಲಿಸುವುದು ಹೇಗೆ?
ಕರ್ನಾಟಕ ವಸತಿ ಇಲಾಖೆಯ ವೆಬ್ ಸೈಟ್ https://ashraya.karnataka.gov.in/ಗೆ ಲಾಗಿನ್ ಆಗಿ.
Register ಆಪ್ಶನ್ ಆಯ್ಕೆ ಮಾಡಿ.
ಮೊಬೈಲ್ ನಂಬರ್, ಆಧಾರ್ ಮತ್ತು ಇ-ಮೇಲ್ ID ನಮೂದಿಸಿ.
ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಕ್ರಿಯೇಟ್ ಮಾಡಿ.
Apply Online ಮೇಲೆ ಕ್ಲಿಕ್ ಮಾಡಿ
1BHK/ 2BHK ಮನೆ ಪ್ರಕಾರವನ್ನು ಆಯ್ಕೆಮಾಡಿ.
ಫಾರ್ಮ್ ನಲ್ಲಿ ವಿವರಗಳನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ.
Submit ಆಪ್ಶನ್ ಮೇಲೆ ಕ್ಲಿಕ್ ಮಾಡಿ.