ಬೆಂಗಳೂರು: ಬೆಂಗಳೂರಿನಲ್ಲಿರುವ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯ (DRDO Recruitment 2025) ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಶ್ ಮೆಂಟ್ ನಲ್ಲಿ 130 ಅಪ್ರೆಂಟಿಸ್ ಹುದ್ದೆಗಳಿಗಾಗಿ ಅನ್ ಲೈನ್ ಹಾಗೂ ಆಫ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು nats.education.gov.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮೇ 8 ಕೊನೆಯ ದಿನವಾಗಿದೆ.
ಯಾವ ಹುದ್ದೆ ಎಷ್ಟು ಖಾಲಿ?
ಗ್ರ್ಯಾಜುಯೇಟ್ ಅಪ್ರೆಂಟಿಸ್ ಟ್ರೈನೀಸ್-ನಾನ್ ಎಂಜಿನಿಯರಿಂಗ್-30
ಡಿಪ್ಲೋಮಾ ಅಪ್ರೆಂಟಿಸ್ ಟ್ರೈನೀಸ್- 20
ಐಟಿಐ ಅಪ್ರೆಂಟಿಸ್ ಟ್ರೈನೀಸ್- 25
ಗ್ರ್ಯಾಜುಯೇಟ್ ಅಪ್ರೆಂಟಿಸ್ ಟ್ರೈನೀಸ್- ಎಂಜಿನಿಯರಿಂಗ್-75
ವಿದ್ಯಾರ್ಹತೆ ಏನು?
ಗ್ರ್ಯಾಜುಯೇಟ್ ಅಪ್ರೆಂಟಿಸ್ ಟ್ರೈನೀಸ್-ನಾನ್ ಎಂಜಿನಿಯರಿಂಗ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಬಿಬಿಎ ಕೋರ್ಟ್ ಮುಗಿಸಿರಬೇಕು. ಇನ್ನು ಎಂಜಿನಿಯರಿಂಗ ವಿಭಾಗದಲ್ಲಿ ಅರ್ಜಿ ಸಲ್ಲಿಸುವವರು ಬಿ.ಇ, ಬಿ.ಟೆಕ್ ಪದವಿ ಪಡೆದಿರಬೇಕು. ಡಿಪ್ಲೋಮಾ, ಐಟಿಐ ಅಪ್ರೆಂಟಿಸ್ ಹುದ್ದೆಗಳಿಗೆ ಐಟಿಐ ಹಾಗೂ ಡಿಪ್ಲೋಮಾ ಮುಗಿಸಿರಬೇಕು. ಶೈಕ್ಷಣಿಕ ಮೆರಿಟ್ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವವರಿಗೆ 18-27 ವರ್ಷ ವಯಸ್ಸಾಗಿರಬೇಕು. ಇದು 12 ತಿಂಗಳು ಅಥವಾ ಒಂದು ವರ್ಷದ ಅಪ್ರೆಂಟಿಸ್ ಆಗಿರುತ್ತದೆ. ಜನರಲ್, ಒಬಿಸಿ, ಎಸ್ ಸಿ, ಎಸ್ ಟಿ ಸೇರಿ ಆಯಾ ಕೆಟಗರಿಯ ಅನ್ವಯ ವಯಸ್ಸಿನ ಸಡಿಲಿಕೆ ಇದೆ. ತರಬೇತಿಯ ವೇಳೆ ಸ್ಟೈಪೆಂಡ್ ಕೂಡ ನೀಡಲಾಗುತ್ತದೆ.
ಆಫ್ ಲೈನ್ ಅರ್ಜಿ ಸಲ್ಲಿಸುವ ವಿಳಾಸ
ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಶ್ ಮೆಂಟ್
ಡಿಆರ್ ಡಿಒ, ಮಿನಿಸ್ಟ್ರಿ ಆಫ್ ಡಿಫೆನ್ಸಿ
ಪೋಸ್ಟ್ ಬಾಕ್ಸ್ ನಂ. 9302
ಸಿವಿ ರಾಮನ್ ನಗರ, ಬೆಂಗಳೂರು
560093