ಬೆಂಗಳೂರು: ಮದ್ಯಪ್ರಿಯರಿಗೆ ಒಂದೇ ದಿನ ಡಬಲ್ ಶಾಕ್ ಎದುರಾಗುತ್ತಿದೆ. ರಾಜ್ಯದಲ್ಲಿ ಮಂಗಳವಾರದವರೆಗೆ ಬಿಯರ್ ಸಿಗುವುದಿಲ್ಲ ಎನ್ನುವುದು ಒಂದು ಶಾಕ್ ಆದರೆ, ಇನ್ನು ಮುಂದೆ ಬಿಯರ್ ದರ 45 ರೂ. ಹೆಚ್ಚಳವಾಗಿರುವುದು ಮತ್ತೊಂದು ಶಾಕ್ ಆಗಿದೆ.
ಅಲ್ಲದೇ, ಕಳೆದ 5 ದಿನಗಳಿಂದ ಬಿಯರ್ ಸಿಗುತ್ತಿಲ್ಲ. ಬಿಯರ್ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹೊಸ ಎಂಆರ್ ಪಿ ಪ್ರಿಂಟ್ ಹಾಕಲಾಗುತ್ತಿದೆ. ಇದಕ್ಕೆ ನಾಲ್ಕೈದು ದಿನಗಳ ಸಮಯ ಬೇಕು. ಈ ಹಿನ್ನೆಲೆಯಲ್ಲಿ ಬಿಯರ್ ಸಿಗದೆ ಮದ್ಯ ಪ್ರಿಯರು ಕಂಗಾಲಾಗಿದ್ದಾರೆ. ಹೀಗಾಗಿ ಕಳೆದ ನಾಲ್ಕೈದು ದಿನಗಳಿಂದ ಬಿಯರ್ ಸಪ್ಲೈ ಇಲ್ಲದಾಗಿದೆ.
ಬಿಯರ್ ಸಪ್ಲೈ ಇಲ್ಲದ ಹಿನ್ನೆಲೆಯಲ್ಲಿ ಮದ್ಯಪ್ರಿಯರು ರಾಜ್ಯದಲ್ಲಿ ಪರದಾಡುವಂತಾಗಿದೆ. ಕಳೆದ ಶನಿವಾರ ಕೆಎಸ್ಬಿಸಿಎಲ್ ನಿಂದ ಮದ್ಯದ ಅಂಗಡಿಗಳಿಗೆ ಬಿಯರ್ ಸಪ್ಲೈ ಆಗಿತ್ತು. ಆದರೆ ಇಂದಿನವರೆಗೆ ಕೆಎಸ್ಬಿಸಿಎಲ್ ನಿಂದ ಬಿಯರ್ ಸಪ್ಲೈ ಆಗುತ್ತಿಲ್ಲ. ಬೆಂಗಳೂರಿನ ಯಾವುದೇ ಬಾರ್ ರೆಸ್ಟೋರೆಂಟ್, ವೈನ್ ಸ್ಟೋರ್ ಗಳಲ್ಲಿ ಬಿಯರ್ ಸಿಗುತ್ತಿಲ್ಲ.
ಹೀಗಾಗಿ ಮದ್ಯದ ವ್ಯಾಪಾರಿಗಳೆಲ್ಲ ಹಳೆಯ ಸ್ಟಾಕ್ ಗಳನ್ನು ಖಾಲಿ ಮಾಡುತ್ತಿದ್ದಾರೆ. ಸರ್ಕಾರವು ಸೋಮವಾರದಿಂದ ಬಿಯರ್ ಮೇಲೆ 10 ರಿಂದ 45 ರೂ. ವರೆಗೆ ದರ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಸಪ್ಲೈ ಹೆಚ್ಚಳವಾಗಾದಿನಿಂದರ ಬಿಯರ್ ಸಪ್ಲೈ ಆಗುತ್ತಿಲ್ಲ. ಬಿಯರ್ ಮಾರಾಟದಿಂದ ಸರ್ಕಾರಕ್ಕೆ ಕಡಿಮೆ ಲಾಭವಾಗುತ್ತಿದೆ. ಹೀಗಾಗಿ ಬಿಯರ್ ದರವನ್ನು ಏರಿಕೆ ಮಾಡಲಾಗಿದೆ.