ಬೆಂಗಳೂರು: ಮಾಜಿ ಶಾಸಕ ಹಾಗೂ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್(Vatal Nagaraj) ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಾಗ್ದಾಳಿ ನಡೆಸಿದ್ದಾರೆ. ಬೆಳಗಾವಿಯಲ್ಲಿ (Belagavi) ಮರಾಠಿ (Marathi) ಪುಂಡ ಯುವಕರಿಂದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ (KSRTC Bus Conductor) ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ಈಗಲೇ ಗಂಟುಮೂಟೆ ತೆಗೆದುಕೊಂಡು ಮಹಾರಾಷ್ಟ್ರಕ್ಕೆ (Maharashtra) ಹೋಗಮ್ಮ ಎಂದು ಕಿಡಿಕಾರಿದ್ದಾರೆ.
ಬೆಳಗಾವಿ ಮಹಾರಾಷ್ಟ್ರಕ್ಕೆ ಹೋಗೋದಾಗಿ ತೀರ್ಮಾನ ಆದರೆ ಮೊದಲು ನಾನು ಹೋಗುತ್ತೇನೆ ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದರು. ಅದಕ್ಕೆ ಈಗಲೇ ಹೋಗಮ್ಮ ಗಂಟು ಮೂಟೆ ತೆಗೆದುಕೊಂಡು ಅಂತ ವಾಟಾಳ್ ಗುಡುಗಿದ್ದಾರೆ. ಕಾಂಗ್ರೆಸ್‌ನವರು ಮರಾಠಿ ಏಜೆಂಟ್, ಬಿಜೆಪಿಯವರು ಸಂಪೂರ್ಣ ಮರಾಠಿ ಬೆಂಬಲಿಗರಾಗಿದ್ದಾರೆ. ಮರಾಠಿಯವರು ಬೆಳಗಾವಿಯಲ್ಲಿದ್ದರೆ ಇರಲಿ. ಹೋಗ್ತಾರೆ ಎಂದಾದರೆ ಈಗಲೇ ಮಹಾರಾಷ್ಟ್ರಕ್ಕೆ ಹೋಗಲಿ. ಮಹಾರಾಷ್ಟ್ರದಲ್ಲಿ ಸಿಂಧೆ, ಉದ್ದವ್ ಠಾಕ್ರೆ ರಾಜಕೀಯಕ್ಕಾಗಿ ಬೆಳಗಾವಿ ಬಳಸಿಕೊಳ್ಳುತ್ತಿದ್ದಾರೆ ಎಂದು ಗುಡುಗಿದ್ದಾರೆ.