ಬಿಗ್‌ಬಾಸ್ ಮನೆಯಲ್ಲಿ ಧ್ರುವಂತ್ ಅವರು ಸಖತ್ ಆಕ್ಟಿವ್ ಆಗಿದ್ದಾರೆ. ಧ್ರುವಂತ್ ಅವರಿಗೆ ಗಿಲ್ಲಿ ಅವರ ಕಾಮಿಡಿ ಬಗ್ಗೆ ಆಕ್ಷೇಪವಿದೆ. ಬೇರೆ ಸ್ಪರ್ಧಿಗಳ ವ್ಯಕ್ತಿತ್ವಕ್ಕೆ ಗಿಲ್ಲಿ ಮಸಿ ಬಳಿಯುತ್ತಾರೆ ಎಂಬುದು ಧ್ರುವಂತ್ ಆರೋಪ. ಈ ವಾರ ಗಿಲ್ಲಿ ಅವರ ಬಳಿ ದೇವರ ಮುಂದೆಯೇ ವಿಶೇಷ ಮನವಿ ಮಾಡಿದ್ದಾರೆ ಧ್ರುವಂತ್. ಸೋಲುವರೆಗೂ ಸೋಲಬೇಡಿ ಅಂತ ಸುದೀಪ್ ಹೇಳಿರುವ ಮಾತನ್ನು ಧ್ರುವಂತ್ ಈಗ ಪಾಲಿಸುತ್ತಿದ್ದಾರೆ. ಗೇಮ್‌ವನ್ನು ಚೆನ್ನಾಗಿ ಆಡುತ್ತಿದ್ದಾರೆ.
ದೇವರ ಮುಂದೆ ಗಿಲ್ಲಿಯನ್ನು ಕರೆದುಕೊಂಡು ಹೋಗಿ ಧ್ರುವಂತ್, ಸ್ನೇಹಪೂರ್ವಕವಾಗಿ ಒಂದು ಮಾತು ಹೇಳುತ್ತೇನೆ. ನಾನು ಈ ಮನೆಯಲ್ಲಿ ಆಡುತ್ತಿರುವ ಆಟಕ್ಕೆ ತುಂಬ ಗೌರವ ಕೊಡುತ್ತೇನೆ. ಅದಕ್ಕೆ ಸಾಕ್ಷಿಯೇ ಈ ದೇವಿ. ನೀವು ದಯವಿಟ್ಟು ನನ್ನನ್ನು ಮತ್ತು ನನ್ನ ಆಟವನ್ನು ಅವಮಾನಿಸಬೇಡಿ. ನನ್ನ ಹಿಂದೆ ಹೇಗೆ ಇರುತ್ತೀರೋ ಅದು ನನಗೆ ಗೊತ್ತಿಲ್ಲ. ಅದು ನಿಮ್ಮ ವ್ಯಕ್ತಿತ್ವ. ನಿಮಗೆ ಅಭ್ಯಂತರ ಇಲ್ಲ ಎಂದರೆ ನಮ್ಮನ್ನು ಬಿಟ್ಟು ಬಿಡಿ. ಹೆಂಗೋ ಬಡಜೀವ ಬದುಕಿಕೊಳ್ಳುತ್ತದೆ ಎಂದು ಮನವಿ ಮಾಡಿದ್ದಾರೆ.
ಬೇರೆಯವರನ್ನು ಅಪಹಾಸ್ಯ ಮಾಡುವ ಮೂಲಕ ಗಿಲ್ಲಿ ನಟ ಅವರು ಕ್ರೆಡಿಟ್ ಪಡೆದುಕೊಳ್ಳುತ್ತಿದ್ದಾರೆ ಎಂಬುದು ಧ್ರುವಂತ್ ಆರೋಪ.ಧೈರ್ಯದಿಂದ ಆಟ ಮುಂದುವರಿಸುವಂತೆ ಧ್ರುವಂತ್ ಅವರಿಗೆ ಕಿಚ್ಚ ಸುದೀಪ್ ಸಲಹೆ ನೀಡಿದ್ದರು. ‘ಸೋಲುವವರೆಗೂ ಸೋಲಬೇಡಿ’ ಎಂದು ಧೈರ್ಯ ತುಂಬಿದ್ದರು. ಆ ಕಾರಣದಿಂದ ಧ್ರುವಂತ್ ಅವರು ಈಗ ಬಿಗ್ ಬಾಸ್ ಆಟವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ : ಅನಗತ್ಯ ಜಗಳಕ್ಕೆ ಇಳಿಯಬೇಡಿ, ನಿಮ್ಮ ಸೋಲಿಗೆ ಕಾಯುವವರಿದ್ದಾರೆ : ಗಂಭೀರ್‌ಗೆ ಆಕಾಶ್ ಚೋಪ್ರಾ ಕಿವಿಮಾತು



















