ಬೆಂಗಳೂರು: ಉತ್ತಮವಾಗಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ವೇಳೆ ಉಳಿದ ವಿದ್ಯಾರ್ಥಿಗಳನ್ನು ಹೀಯಾಳಿಸುವ ಅಭ್ಯಾಸ ಕೊನೆಗೊಳಿಸಬೇಕು ಎಂದು ತಜ್ಱ ವೈದ್ಯರಾದ ಡಾ. ಆಂಜನಪ್ಪ ಅಭಿಪ್ರಾಯಪಟ್ಟರು.
ಬೆಂಗಳೂರಿನ ಎಚ್ಬಿಆರ್ ಲೇಔಟ್ನ ನವ ಜೀವ ಕನ್ವೆನ್ಷನ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಸಿನಾಪ್ಸ್ (CNAPS) ಒಲಿಂಪಿಯಾಡ್ 2024-25ರ ಆವೃತ್ತಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
”ನಾವು ಪ್ರತಿಬಾರಿಯೂ ಇನ್ನೊಬ್ಬರ ಹೊಗಳಿಕೆಗಾಗಿ ಕಾಯುತ್ತಿರುತ್ತೇವೆ. ಆದರೆ, ಕೆಲವೊಂದು ಬಾರಿ ನಮಗೆ ಆ ಅನುಕೂಲ ಸಿಗುವುದಿಲ್ಲ. ಅಂಥ ವೇಳೆ ನಾವೇ ನಮ್ಮ ಬೆನ್ನು ತಟ್ಟಿಕೊಂಡು ಸಾಧನೆಯ ಹಾದಿಯಲ್ಲಿ ಮುಂದುವರಿಯಬೇಕು. ಅಂತೆಯೇ ಕಡಿಮೆ ಸಾಧನೆ ಮಾಡುವ ತಮ್ಮ ಮಕ್ಕಳನ್ನು ಇನ್ನೊಬ್ಬರ ಮುಂದೆ ಹೀಯಾಳಿಸುವ ಬದಲಿಗೆ ಪ್ರೋತ್ಸಾಹಿಸುವ ಮೂಲಕ ಸಾಧನೆ ಮಾಡಲು ಪ್ರೇರೇಪಿಸಬೇಕು,” ಎಂದು ಅವರು ಸಲಹೆ ನೀಡಿದರು.

ನಾರಾಯಣ ಗ್ರೂಪ್ ಆಫ್ ಸ್ಕೂಲ್ಸ್ನ ಅಮೋಘ ಸಾಧನ ನಾರಾಯಣ ಗ್ರೂಪ್ ಆಫ್ ಸ್ಕೂಲ್ನ 18 ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಪ್ರಥಮ ರ್ಯಾಂಕ್, ಅಗ್ರ 10 ರ್ಯಾಂಕಿಂಗ್ನಲ್ಲಿ 168 ವಿದ್ಯಾರ್ಥಿಗಳು, ಅಗ್ರ 25ರ ರ್ಯಾಂಕ್ಗಿಂತ ಒಳಗೆ 420 ವಿದ್ಯಾರ್ಥಿಗಳು, 50ರ ರ್ಯಾಂಕ್ ಒಳಗೆ 850 ವಿದ್ಯಾರ್ಥಿಗಳು, ಮತ್ತು 100ರ ರ್ಯಾಂಕ್ಗಿಂತ ಒಳಗೆ 1200 ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ರಾಜ್ಯ ಮಟ್ಟದಲ್ಲಿ 70% ಗರಿಷ್ಠ ಸಾಧನೆ ಮಾಡಿದ್ದು, ಒಟ್ಟು 1700 ವಿದ್ಯಾರ್ಥಿಗಳು ನಾರಾಯಣ ಗ್ರೂಪ್ ಆಫ್ ಸ್ಕೂಲ್ನಿಂದ ಅರ್ಹರಾಗಿದ್ದಾರೆ.
ಯಾವ ವಿಭಾಗದಲ್ಲಿ ಸ್ಪರ್ಧೆ 6ರಿಂದ 10ನೇ ತರಗತಿಗಳಿಗೆ ‘O’ ಸರಣಿಯ ಭಾಗವಾಗಿ ಒಲಂಪಿಯಾಡ್ ಆಯೋಜಿಸಲಾಗಿತ್ತು. ಒಲಂಪಿಯಾಡ್ ಇನ್ ಮ್ಯಾಥಮೆಟಿಕ್ಸ್ (ROM), ಜೂನಿಯರ್ ಒಲಂಪಿಯಾಡ್ ಇನ್ ಸೈನ್ಸ್ ಮತ್ತು ಆಸ್ಟ್ರಾನಮಿ (JOSA), ನ್ಯಾಷನಲ್ ಟ್ಯಾಲೆಂಟ್ ಎಕ್ಸಾಮ್ (NTEX), 1ರಿಂದ 10ನೇ ತರಗತಿಗಳಿಗೆ ಇಂಟರ್ನ್ಯಾಷನಲ್ ಸ್ಟಾಂಡರ್ಡ್ ಮ್ಯಾಥಮೆಟಿಕಲ್ ಒಲಂಪಿಯಾಡ್ (ISMO), ಇಂಟರ್ನ್ಯಾಷನಲ್ ಸ್ಟಾಂಡರ್ಡ್ ಇಂಗ್ಲೀಷ್ ಒಲಂಪಿಯಾಡ್ (ISEO), ಇಂಟರ್ನ್ಯಾಷನಲ್ ಸ್ಟಾಂಡರ್ಡ್ ಸೈನ್ಸ್ ಒಲಂಪಿಯಾಡ್ (ISSO), ಇಂಟರ್ನ್ಯಾಷನಲ್ ಸ್ಟಾಂಡರ್ಡ್ ಸೈಬರ್ ಒಲಂಪಿಯಾಡ್ (ISCO), ಮತ್ತು ಇಂಟರ್ನ್ಯಾಷನಲ್ ಸ್ಟಾಂಡರ್ಡ್ ನಾಲೆಜ್ ಒಲಂಪಿಯಾಡ್ (ISKO) ವಿಭಾಗದಲ್ಲಿ ಪರೀಕ್ಷೆಗಳು ನಡೆದವು.
ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕಾರ್ಯನಿರ್ವಹಣಾ ವಿಭಾಗದ ಉಪಾಧ್ಯಕ್ಷ ರಾಮ್ ಮೋಹನ್ ಶ್ರೀಪಾದ, ಸಹಾಯಕ ಉಪಾಧ್ಯಕ್ಷ ರಾಮ್ ಶಿರಾ, ರಜನೀಕಾಂತ್ ರೆಡ್ಡಿ ಶಿಜು, ಕೆ. ವೆಂಕಟೇಶ್ವರ ರೆಡ್ಡಿ, ಶಿವ ರೆಡ್ಡಿ, ಪ್ರದೀಪ್ ರೆಡ್ಡಿ, ಹುಸೇನ್ ಪೀರ್ ಬಾಶಾ, ಕೆ. ನರೇಂದ್ರ ಕುಮಾರ್, ಪಿ. ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು



















