ತುಮಕೂರು: ಯುಗಾದಿ ಹಬ್ಬ ಸಮೀಪಿಸುತ್ತಿದ್ದಂತೆ ಮತ್ತೆ ಹಲಾಲ್ ಕಟ್ ವಿವಾದ ಮುನ್ನೆಲೆಗೆ ಬಂದಿದೆ. ಯುಗಾದಿ ಹೊಸತೊಡಕಿಗೆ ಹಲಾಲ್ ಕಟ್ ಮಾಂಸ ಬಳಸದಂತೆ ಹಾಗೂ ಆ ವೇಳೆ ಮುಸ್ಲಿಂ ಅಂಗಡಿಗಳಿಂದ ಮಾಂಸ ಖರೀದಿಸದಂತೆ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಹಿಂದೂಗಳು ಶ್ರೀರಾಮನವಮಿ ಹಾಗೂ ಯುಗಾದಿಯನ್ನು ಹಲಾಲ್ ಮುಕ್ತವಾಗಿ ಆಚರಣೆ ಮಾಡಿ. ಯುಗಾದಿ ಹೊಸ ವರ್ಷದ ಹಬ್ಬ, ಶಾಸ್ತ್ರೋಕ್ತ, ವೈಜ್ಞಾನಿಕವಾದ ಅತ್ಯಂತ ಶ್ರೇಷ್ಠವಾದ ದಿನ. ಹೂ, ಹಣ್ಣು, ತರಕಾರಿ, ಮಾಂಸದ ಮೇಲೆ ಉಗುಳಿರುತ್ತಾರೆ. ಮೂತ್ರ ಮಾಡಿರುತ್ತಾರೆ. ಹೀಗಾಗಿ ಮುಸ್ಲಿಂ ಅಂಗಡಿಗಳಲ್ಲಿ ಖರೀದಿ ಮಾಡಬೇಡಿ ಎಂದು ಆರೋಪಿಸಿದ್ದಾರೆ.
ಶುದ್ಧವಾದ, ಪವಿತ್ರವಾದ ಅಂಗಡಿಗಳಲ್ಲಿ ಖರೀದಿ ಮಾಡಿ, ಹಬ್ಬ ಆಚರಣೆ ಮಾಡಿ. ಗೋ ಹಂತಕರು, ಗೋ ಭಕ್ಷಕರು, ಗೋ ಕಳ್ಳರ ಜೊತೆಗೆ ಹಬ್ಬವನ್ನು ಆಚರಣೆ ಮಾಡಬೇಡಿ. ಪಾಕಿಸ್ತಾನ್ ಜಿಂದಾಬಾದ್, ದೇಶ ದ್ರೋಹಿಗಳಿಗೆ ಬೆಂಬಲ ಕೊಡುವಂಥವರ ಜೊತೆಗೆ ವ್ಯಾಪಾರ- ವ್ಯವಹಾರ ಮಾಡಬೇಡಿ. ಯುಗಾದಿ ಹಬ್ಬವನ್ನು ಶುದ್ಧವಾಗಿ ಆಚರಣೆ ಮಾಡಿ. ಹಿಂದೂಗಳ ಅಂಗಡಿಗಳ ಜೊತೆಗೆ ವ್ಯವಹಾರ ಮಾಡಿ. ರಾಜ್ಯಾದ್ಯಂತ ಕರಪತ್ರ ಹಂಚುವ ಮೂಲಕ ಪ್ರಚಾರು ಮಾಡುತ್ತಿದ್ದೇವೆ. ಹಲಾಲ್ ಮಾಂಸ ಖರೀದಿ ಮಾಡಬೇಡಿ. ಜಟಕಾ ಮಾಂಸ ಖರೀದಿಸಿ.ಲವ್ ಜಿಹಾದ್ ಗೆ ಸಂಬಂಧಿಸಿದ್ದಂತೆ ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸುವವರ ಜೊತೆಗೆ ವ್ಯವಹರಿಸಬೇಡಿ ಎಂದು ಕರೆ ನೀಡಿದ್ದಾರೆ.