ಬೆಂಗಳೂರು : ಮನೆ ಕೆಲಸದ ಮಹಿಳೆಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಜೀವಾವಧಿ ಶಿಕ್ಷೆ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಅರ್ಜಿ ಸಲ್ಲಿಸಿದ್ದು, ಕ್ರಿಮಿನಲ್ ಮೇಲ್ಮನವಿಯನ್ನು ಅರ್ಜಿ ವಿಚಾರಣೆ ಮಾಡುತ್ತಿದ್ದಾರೆ.
ಪ್ರಜ್ವಲ್ 2024 ರ ಏಪ್ರಿಲ್ 24 ರಂದು ದೇಶ ತೊರೆಯುವಾಗ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ಇವರ ವಿರುದ್ಧ ಪ್ರಕರಣ ದಾಖಲಾಗಿರುವುದು ಏಪ್ರಿಲ್ 28ರಂದು, ಐಪಿಸಿ ಸೆಕ್ಷನ್ 201 ರ ಅಡಿ ಸಾಕ್ಷ್ಯ ನಾಶಪಡಿಸಿರುವುದಕ್ಕೆ ಪ್ರೊ. ರವಿವರ್ಮ ಕುಮಾರ್ ಅವರು ಪ್ರಾಸಿಕ್ಯೂಟ್ ಮಾಡಿದ್ದಾರೆಯೇ? ಎಂದು ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ ವಾದ ಮಂಡಿಸಿದ್ದಾರೆ. ಸದ್ಯ ಜಿಯೊ ಮ್ಯಾಪ್ ಅನ್ನು ವಿಚಾರಣಾಧೀನ ನ್ಯಾಯಾಧೀಶರು ಪರಿಗಣಿಸಿದ್ದಾರೆ.
ಇದನ್ನು ಹೊರತುಪಡಿಸಿ ಇನ್ನೂ ಮೂರು ಪ್ರಕರಣಗಳು ನನ್ನ ಕ್ಷಕಿದಾರ ವಿರುದ್ಧ ಇವೆ. ಯಾವುದೇ ರೀತಿಯಲ್ಲೂ ನನ್ನ ಕ್ಷಕಿದಾರರು ದೇಶ ತೊರೆಯುವುದಿಲ್ಲ. ಅವೆಲ್ಲವನ್ನೂ ಅರ್ಜಿದಾರರು ಎದುರಿಸುತ್ತಾರೆ. ಪ್ರಜ್ವಲ್‌ರಿಂದ ಅತ್ಯಾಚಾರಕ್ಕೆ ಒಳಗಾಗ ಸಂತ್ರಸ್ತೆಯನ್ನು ಅಪಹರಣ ಮಾಡಿದ ಪ್ರಕರಣದಲ್ಲಿ ಪ್ರಜ್ವಲ್ ಆರೋಪಿಯಲ್ಲ ಎಂದು ವಾದ ಮಾಡಿದ್ದಾರೆ.
ಇದನ್ನೂ ಓದಿ ; “ಇನ್ನು ನನ್ನಿಂದ ಸಾಧ್ಯವಿಲ್ಲ”: ಕೆಲಸದ ಒತ್ತಡ ತಾಳಲಾರದೆ BLO ಆತ್ಮಹತ್ಯೆ | ವಿಡಿಯೋ ವೈರಲ್



















