ಬೆಂಗಳೂರು: ಗೃಹ ಬಳಕೆ ಸಿಲಿಂಡರ್‌ಗಳನ್ನು ಕಮರ್ಷಿಯಲ್ ಉದ್ದೇಶಕ್ಕೆ ಬಳಕೆ ಮಾಡಿದ ಹಿನ್ನೆಲೆ ರಾಜ್ಯದ 28 ಕಡೆಯಲ್ಲಿ ಅಧಿಕಾರಿಗಳು ಮೆಗಾ ಕಾರ್ಯಾಚರಣೆ ಕೈಗೊಂಡು 1448 ಸಿಲಿಂಡರ್ ಗಳನ್ನ ಜಪ್ತಿ ಮಾಡಿದ್ದಾರೆ. ಅಗತ್ಯ ವಸ್ತುಗಳ ಕಾಯ್ದೆ 1955ನಡಿ ರಾಜ್ಯಾದ್ಯಂತ ಬರೋಬ್ಬರಿ 25 ಎಫ್‌ಐಆರ್ ದಾಖಲಿಸಲಾಗಿದೆ.
ಗೃಹ ಬಳಕೆಯ ಸಿಲಿಂಡರ್ ವಾಣಿಜ್ಯಕ್ಕೆ ಬಳಕೆ ಮಾಡಿದ ಜಿಲ್ಲೆಗಳಲ್ಲಿ ಬಾಗಲಕೋಟೆ 64, ಬೆಂ.ದಕ್ಷಿಣ ವಲಯ 11, ಬೆಂಗಳೂರು ಉತ್ತರ ವಲಯ 3, ಪಶ್ಚಿಮ ವಲಯ 4, ಪೂರ್ವ ವಲಯ 4, ಬೆಂಗಳೂರು ದಕ್ಷಿಣ ಜಿಲ್ಲೆ 39 ಸೇರಿ ಬೆಂಗಳೂರು ನಗರದಲ್ಲಿ 485 LPG ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ.
ಗೃಹ ಬಳಕೆಯ ಸಿಲಿಂಡರ್ ವಾಣಿಜ್ಯಕ್ಕೆ ಬಳಕೆಮಾಡಿದ ಕಾರಣ ಬೆಂಗಳೂರು ಗ್ರಾಮಾಂತರದಲ್ಲಿ 115, ಬೆಳಗಾವಿ 17, ಬೀದರ್ 105, ಚಿಕ್ಕಬಳ್ಳಾಪುರ 135, ಚಿಕ್ಕಮಗಳೂರು 3, ಚಿತ್ರದುರ್ಗ 12, ದಾವಣಗೆರೆ 68, ಧಾರವಾಡ 51, ಹಾಸನ 10, ಕೋಲಾರ 10, ಕೊಪ್ಪಳ 42, ರಾಯಚೂರು 4, ಶಿವಮೊಗ್ಗ 7, ತುಮಕೂರು 37, ವಿಜಯಪುರ 16, ಯಾದಗಿರಿ 100, ಬಳ್ಳಾರಿ 1, ಕಲಬುರಗಿ 7, ಮೈಸೂರು 52, ಉತ್ತರ ಕನ್ನಡದಲ್ಲಿ 3 ಸಿಲಿಂಡರ್‌ಗಳನ್ನುಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಪಾನಿಪುರಿ ವ್ಯಾಪಾರಕ್ಕೂ ತಟ್ಟಿದ ವಾರ್ ಎಫೆಕ್ಟ್..!



















