ಬಿಗ್‌ಬಾಸ್ ಶೋನಲ್ಲಿ ಸ್ಪರ್ಧಿಸಿದ್ದ ಡಾಗ್ ಬ್ರೀಡರ್ ಸತೀಶ್ ಅವರು ಗಿಲ್ಲಿ ನಟನ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದ್ದರು. ಅವರ ವಿರುದ್ಧ ಗಿಲ್ಲಿ ಅಭಿಮಾನಿಗಳು ಗರಂ ಆಗಿದ್ದರು. ಕೆಲವರು ಸತೀಶ್ ಅವರಿಗೆ ಕೊಲೆ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಿದ್ದರು. ಅಂಥವರ ವಿರುದ್ಧ ಸತೀಶ್ ಅವರು ಕಾನೂನು ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಲಿದು ಬಂದಿದೆ.
ಈ ಕುರಿತು ಸ್ವತಃ ಸತೀಶ್ ಮಾಹಿತಿ ನೀಡಿದ್ದು, ಬಿಗ್ ಬಾಸ್ ಕುರಿತು ನನ್ನ ಅನಿಸಿಕೆ ಹೇಳಿದ್ದೆ. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿಗೆ ವೋಟ್ ಹಾಕಿ, ಸರಿಯಾಗಿ ಆಡುವವರನ್ನು ವಿನ್ ಮಾಡಿ ಅಂತ ನಾನು ಹೇಳಿದ್ದೆ. ಅದಕ್ಕಾಗಿ ಗಿಲ್ಲಿ ಫ್ಯಾನ್ಸ್ ಕೊಲೆ ಬೆದರಿಕೆ ಹಾಕಿದ್ದರು. ಚಾಮರಾಜಪೇಟೆ ಠಾಣೆಯಲ್ಲಿ ದೂರು ಕೊಟ್ಟಿದ್ದೆ. ಅದಕ್ಕಾಗಿ 8 ಜನರನ್ನು ಅರೆಸ್ಟ್ ಮಾಡಲಾಗಿದೆ. ಇನ್ನೂ ಯಾರಾದರೂ ಮಾತನಾಡಿದರೆ ಅವರ ಮೇಲೂ ಕೇಸ್ ಹಾಕುತ್ತೇನೆ ಎಂದಿದ್ದಾರೆ.
ಎಷ್ಟೇ ಟ್ರೋಲ್ ಮಾಡಿದರೂ ನನಗೆ ಏನೂ ಅನಿಸಲ್ಲ. ಆದರೆ ತೀರಾ ಪರ್ಸನಲ್ ಆಗಿ ಕೊಲೆ ಬೆದರಿಕೆ ಹಾಕಿದವರ ಮೇಲೆ ಕೇಸ್ ಹಾಕಿದ್ದೇನೆ. 80 ಜನರ ಮೇಲೆ ಕೇಸ್ ಹಾಕಿದ್ದೇನೆ. ಅದರಲ್ಲಿ 8 ಜನರು ಅರೆಸ್ಟ್ ಆಗಿದ್ದಾರೆ. ಅವರನ್ನು ಕೋರ್ಟ್ಗೆ ಎಳೆಯುತ್ತಿದ್ದೇನೆ. ಅಲ್ಲದೇ, ಅವರ ಮೇಲೆ 1 ಕೋಟಿ ರೂಪಾಯಿಗೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ATM ಗೆ ಹಾಕಲು ಕೊಟ್ಟಿದ್ದ ಒಂದು ಕೋಟಿಗೂ ಅಧಿಕ ಹಣ ದೋಚಿ ಪರಾರಿಯಾದ ಸಿಬ್ಬಂದಿ



















